ನಿವೃತ್ತಿ ಹೊಂದಿದ ಕಲ್ಪಣೆ ಪ್ರೌಢಶಾಲಾ ಶಿಕ್ಷಕ ಸಹದೇವ್ ಏರಾಜೆಯವರಿಗೆ ಬೀಳ್ಕೊಡುಗೆ ಕಾರ್ಯಕ್ರಮ

0

ಪುತ್ತೂರು: ಸರ್ವೆ ಗ್ರಾಮದ ಕಲ್ಪಣೆ ಸರಕಾರಿ ಪ್ರೌಢಶಾಲೆಯಲ್ಲಿ ಕಳೆದ ಆರು ವರ್ಷಗಳಿಂದ ದೈ.ಶಿ. ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಸಹದೇವ್ ಏರಾಜೆ ಅವರಿಗೆ ಬೀಳ್ಕೊಡುಗೆ ಸಮಾರಂಭ ಶಾಲಾ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ದಿ ಸಮಿತಿ ಕಾರ್ಯಾದ್ಯಕ್ಷ ಸಿದ್ದೀಕ್ ಸುಲ್ತಾನ್ ಮಾತನಾಡಿ ಉತ್ತಮ ಶಿಕ್ಷಕರೊಬ್ಬರು ವಿದಾಯ ಹೇಳುತ್ತಿರುವುದು ಬಹಳ ಖೇದಕರ ಸಂಗತಿ ಆದರೂ ವೃತ್ತಿ ಜೀವನ ಮುಗಿದರೆ ವಿದಾಯ ಹೇಳಲೇ ಬೇಕಾಗಿದೆ, ನಮ್ಮೊಂದಿಗೆ ಉತ್ತಮ ಭಾಂಧವ್ಯವನ್ನು ಬೆಳೆಸಿಕೊಂಡಿದ್ದ ಸಹದೇವ್ ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.

ಶಾಲಾ ನಿಕಟಪೂರ್ವ ನಿವೃತ್ತ ಮುಖ್ಯಗುರು ಜಯರಾಮ ಶೆಟ್ಟಿ, ಶಿಕ್ಷಕಿ ಉಮೈರಾ ತಬಸ್ಸಮ್, ಶಿಕ್ಷಕರಾದ ವೆಂಕಟೇಶ್, ಉಮಾ ಶಂಕರ್, ಶಿಕ್ಷಕಿಯರಾದ ಕಮಲ, ಹರ್ಷಿತಾ ಮತ್ತಿತರರು ತಮ್ಮ ಅನಿಸಿಕೆ ವ್ಯಕ್ತಪಡಿಸಿದದರು.
ಸಹದೇವ್ ಏರಾಜೆ ದಂಪತಿಯನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.
ಶಿಕ್ಷಕಿ ಕಾಂಚನಾ ಅಭಿನಂದನಾ ಪತ್ರ ವಾಚಿಸಿದರು. ಶಾಲಾಭಿವೃದ್ದಿ ಸಮಿತಿ ಸದಸ್ಯರಾದ ಅಝೀಝ್ ರೆಂಜಲಾಡಿ, ಹರೀಶ್ ಆಚಾರ್ಯ, ಹಸೈನಾರ್ ಹಾಗೂ ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕಿ ಉಮಾವತಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಿಕ್ಷಕಿ ನಳಿನಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here