ಪುತ್ತೂರು: ದರ್ಬೆ ದುಗ್ಗಮ್ಮ ದೇರಣ್ಣ ಸಭಾಭವನದ ಎದುರುಗಡೆಯ ಲಕ್ಷ್ಮೀ ಆರ್ಕೇಡ್‌ನಲ್ಲಿ ಪುತ್ತೂರಿನ ಮೊಟ್ಟ ಮೊದಲ ಪ್ಲೇಸ್ಟೇಷನ್ ಗೇಮಿಂಗ್ ಸೆಂಟರ್ ಕಾಸ್ಮಿಕ್ ಗೇಮ್ಸ್ ಎ.9ರಂದು ಶುಭಾರಂಭಗೊಳ್ಳಲಿದೆ.
ಪುತ್ತೂರು ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್‌ನ ಅಧ್ಯಕ್ಷ ಪಿ ವಾಮನ ಪೈ, ಸಿಎಮ್‌ಸಿ ಪುತ್ತೂರು ಮೆಂಬರ್ ಮೊಹಮ್ಮದ್ ರಿಯಾಝ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಸಂಸ್ಥೆಯ ಮಾಲಕ ಅಭಿಮನ್ಯು ಚೆವ್ಲಿ, ಸುಪ್ರೀತ್ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.