ಪುಣಚ ಗ್ರಾಮದಲ್ಲಿ ವೋಟು ಕಡಿಮೆ ಬಿದ್ದರೂ ಅಭಿವೃದ್ದಿಯಲ್ಲಿ ತಾರತಮ್ಯ ಮಾಡಿಲ್ಲ; ಶಾಸಕ ಅಶೋಕ್ ರೈ
ಪುತ್ತೂರು:ಪುಣಚ ಗ್ರಾಮದ ಮಹಿಷಮರ್ದಿನಿ ದೇವಸ್ಥಾನಕ್ಕೆ ತೆರಳುವ ರಸ್ತೆಯನ್ನು ಅಭಿವೃದ್ದಿ ಮಾಡಬೇಕೆಂದು ಇಲ್ಲಿನ ಭಕ್ತಾಧಿಗಳು ಅನೇಕ ವರ್ಷದಿಂದ ಬೇಡಿಕೆ ಇಟ್ಟಿದ್ದರೂ ಬೇಡಿಕೆ ಈಡೇರಿರಲಿಲ್ಲ , ಕಳೆದ ಚುನಾವಣೆಯ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಈ ರಸ್ತೆಯನ್ನು ಸುಮಾರು 50 ಲಕ್ಷ ರೂ ವೆಚ್ಚದಲ್ಲಿ ಕಾಂಕ್ರೀಟ್ ಮಾಡಿಸಿದ್ದೇನೆ, ಪುಣಚ ಗ್ರಾಮದಲ್ಲಿ ನನಗೆ ವೋಟು ಕಡಿಮೆ ಸಿಕ್ಕಿದರೂ ನಾನು ಅಭಿವೃದ್ದಿಯಲ್ಲಿ ತಾರತಮ್ಯ ಮಾಡಿಲ್ಲ. ಗ್ರಾಮಕ್ಕೆ ಒಟ್ಟು 2 ಕೋಟಿ ಅನುದಾನವನ್ನು ನೀಡಿದ್ದೇನೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಅವರು ಪುಣಚ ಗ್ರಾಮದ ಶ್ರೀ ಮಹಿಷಮರ್ದಿನಿ ದೇವಸ್ಥಾನಕ್ಕೆ ತೆರಳುವ ನೂತನ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದರು.
ರಸ್ತೆಯಲ್ಲದೆ ದೇವಸ್ಥಾನದ ಜಲಕ ಕೇಂದ್ರಕ್ಕೂ 30 ಲಕ್ಷ ಅನುದಾನವನ್ನು ನೀಡುವ ಭರವಸೆ ನೀಡಿದ್ದೇನೆ, ಇಷ್ಟು ವರ್ಷ ಆಗದ ಕೆಲಸವನ್ನು ನಾನು ಮಾಡಿದ್ದೇನೆ, ಆದರೆ ಜನ ಮಾತ್ರ ಇದನ್ನು ನೆನೆಪಿನಲ್ಲಿ ಇಟ್ಟುಕೊಳ್ಳುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.
ಪುತ್ತೂರು ವಿಧಾನಸಭಾ ಕ್ಷೆತ್ರ ಅಭಿವೃದ್ದಿಗೆ ಅನುದಾನಗಳು ಬರುತ್ತಿದೆ, ಕುಡಿಯುವ ನೀರು, ಮೆಡಿಕಲ್ ಕಾಲೇಜು, ಕ್ರೀಡಾಂಗಣ, ಕೆಎಂಎಫ್‌ಗೆ ಜಾಗ ನಿಗದಿ ಸೇರಿದಂತೆ ಹತ್ತು ಹಲವು ಬೆಂಚ್ ಮಾರ್ಕ್ ಕೆಲಸಗಳನ್ನು ಮಾಡಿದ್ದೇನೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದಿ ಕೆಲಸಗಳು ನಡೆಯಲಿದೆ.

ಸರಕಾರದ ಪಂಚ ಗ್ಯಾರಂಟಿಗಳು ಮನೆಯನ್ನು ಬೆಳಗಿಸಿದ್ದು ಜನ ಮುಂದಿನ ದಿನಗಳಲ್ಲಿ ಅಭಿವೃದ್ದಿ ಕಡೆ ಒಲವು ವ್ಯಕ್ತಪಡಿಸುವ ಮೂಲಕ ವೋಟು ಚಲಾವಣೆ ಮಾಡಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪದ್ಮನಾಭ ಪೂಜಾರಿ, ಪುಣಚ ವಲಯ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ, ಸಿರಾಜ್ ಪುಣಚ , ಗ್ರಾಪಂ ಉಪಾಧ್ಯಕ್ಷ ಮಹೇಶ್ ಶೆಟ್ಟಿ, ಮಾರಪ್ಪ ಶೆಟ್ಟಿ, ಶ್ರೀಧರ್ ಶೆಟ್ಟಿ, ಶಂಕರ ನಾರಾಯಣ ಭಟ್, ವಿಶ್ವನಾಥ ರೈ, ರಾಜೇಂದ್ರ ರೈ, ಮಹಾಲಿಂಗ ನಾಯ್ಕ, ಬಾಲಕೃಷ್ಣ ನಾಯ್ಕ , ಗುತ್ತಿಗೆದಾರ ಯತೀಶ್ ಪೂಜಾರಿ ಸೇರಿದಂತೆ ದೇವಸ್ಥಾನದ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.