ವಿಟ್ಲ: ಕೆದಿಲ ಗ್ರಾಮದ ಪಾಟ್ರಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶರಣಪ್ಪ ಉಮ್ಮರಾಗಿ (57ವ.)ರವರು ಎ.8ರಂದು ಹೃದಯಾಘಾತದಿಂದ ನಿಧನರಾದರು. ಅವರಿಗೆ ಶಬರಿಮಲೆ ಯಾತ್ರೆ ಸಂದರ್ಭ ಹೃದಯಾಘಾತ ಸಂಭವಿಸಿದೆ.
ಶರಣಪ್ಪ ರವರು ಪಾಟ್ರಕೋಡಿ ಶಾಲೆಯಲ್ಲಿ 23 ವರ್ಷಗಳಿಂದ ಸೇವೆಯಲ್ಲಿದ್ದು, ಅಲ್ಲಿನ ಶಾಲಾ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಮೃತರ ಶರೀರ ಈಗ ಶಬರಿಮಲೆ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು ಅಲ್ಲಿನ ಕಾನೂನು ಪ್ರಕ್ರಿಯೆ ಬಳಿಕ ಇಂದು ರಾತ್ರಿ ಊರಿಗೆ ತರಲಾಗುತ್ತದೆ ಎಂದು ಮಾಹಿತಿ ಲಭಿಸಿದೆ.
ಮೃತರು ಗಡಿನಾಡ ಕನ್ನಡಿಗರಾಗಿದ್ದು ಸೋಲಾಪುರ ನಿವಾಸಿ ಪತ್ನಿ, ಪುತ್ರಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.