ಪುತ್ತೂರು: ಕೃಷಿ ಇಲಾಖೆಯಿಂದ ಪಿವಿಸಿ ಪೈಪ್ ಹಾಗೂ ಲಘು ಪೋಷಕಾಂಶ (ಬೋರಾಕ್ಸ್) ಪರಿಕರದ ಸೌಲಭ್ಯಗಳನ್ನು ಸಹಾಯ ಧನದಲ್ಲಿ ಪಡೆದುಕೊಳ್ಳಲು ಫಲಾನುಭವಿ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಪ್ರಧಾನಮಂತ್ರಿ ಕೃಷಿ ಸಿಂಚಯಿ ಯೋಜನೆಯಡಿ ಪ್ರತಿ ಹೆಕ್ಟೇರಿಗೆ ಗರಿಷ್ಟ 35 ಪಿ.ವಿ.ಸಿ. ಪೈಪ್‌ಗಳನ್ನು ಎಲ್ಲಾ ವರ್ಗದವರಿಗೂ ಶೇ.50% ಸಹಾಯಧನದಲ್ಲಿ ವಿತರಿಸಲಾಗುವುದು. ಆಹಾರ ಭದ್ರತಾ ಯೋಜನೆಯಡಿ ಲಘು ಪೋಷಕಾಂಶ ಬೋರಾಕ್ಸ್ ಶೇಕಡಾ 50% ಸಹಾಯಧನದಲ್ಲಿ ವಿತರಿಸಲಾಗುವುದು.
ಫಲಾನುಭವಿಗಳು ತಮ್ಮ ಜಾಗದ ಪಹಣಿ, ಪಾಸ್‌ಪೋರ್ಟ್ ಸೈಜ್ ಪೊಟೋ, ಬ್ಯಾಂಕ್ ಪಾಸ್ ಪುಸ್ತಕ ಮತ್ತು ಆಧಾರ್ ನಕಲು ಪ್ರತಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರದೊಂದಿಗೆ ಪುತ್ತೂರಿನ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸುವಂತೆ ರೈತ ಸಂಪರ್ಕ ಕೇಂದ್ರ ಹೋಬಳಿಯ ಕೃಷಿ ಅಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.