ಪುತ್ತೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ 2025 ರ ಮಾರ್ಚ್‌ನಲ್ಲಿ ನಡೆಸಿದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ -1 ಇದರ ಫಲಿತಾಂಶ ಪ್ರಕಟಗೊಂಡಿದ್ದು, ಉನ್ನತ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.
ತೆಂಕಿಲದ ನರೇಂದ್ರ ಪ.ಪೂ.ಕಾಲೇಜಿನ ವಾಣಿಜ್ಯ ವಿಭಾಗದ ಶ್ರೀಶ ಕುಮಾರ್ ಎಸ್. 583(97.16%) ಅಂಕಗಳನ್ನು ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.ಶ್ರೀಶ ಕುಮಾರ್ ಎಸ್. ಇವರು ಲೆಕ್ಕಶಾಸ್ತ್ರ- 99 ,ಅರ್ಥಶಾಸ್ತ್ರ-96, ಸಂಸ್ಕೃತ-97, ಮೂಲಗಣಿತ-100,ವ್ಯವಹಾರ ಅಧ್ಯಯನ-98,ಇಂಗ್ಲಿಷ್-93 ಅಂಕಗಳೊಂದಿಗೆ ಅತ್ಯುತ್ತಮ ಸಾಧನೆಯನ್ನು ಮಾಡಿರುತ್ತಾರೆ. ಇವರು ಬೈಪಾಸ್ ಬಪ್ಪಳಿಗೆ ನಿವಾಸಿ ಸುರೇಶ್ ಕುಮಾರ್ ಎಂ. ಮತ್ತು ಇ ಎಸ್ ಆರ್ ಪ್ರೆಸಿಡೆನ್ಸಿ ಆಂಗ್ಲ ಮಾಧ್ಯಮ ಶಾಲೆ ಮರೀಲ್ ಶಿಕ್ಷಕಿಯಾದ ಸುಶಾಂತಿ ಟಿ. ದಂಪತಿಗಳ ಪುತ್ರ.
ವಾಣಿಜ್ಯ ವಿಭಾಗದಲ್ಲಿ ಗುರುದೀಪ್ ಎನ್. 581( 96.83%) ಇವರು ಲೆಕ್ಕಶಾಸ್ತ್ರ- 97 ,ಅರ್ಥಶಾಸ್ತ್ರ-98, ಸಂಸ್ಕೃತ-100, ಮೂಲಗಣಿತ-98,ವ್ಯವಹಾರ ಅಧ್ಯಯನ-100,ಇಂಗ್ಲಿಷ್-88 ಅಂಕಗಳನ್ನು ಗಳಿಸಿ ಅತ್ಯುತ್ತಮ ಸಾಧನೆಯನ್ನು ಮಾಡಿರುತ್ತಾರೆ. ಇವರು ಪುಣಚ ನಿವಾಸಿಗಳಾದ ಎನ್. ಹರೀಶ್ಚಂದ್ರ ನಾಯಕ್ ಮತ್ತು ಶ್ರೀದೇವಿ ವಿದ್ಯಾಕೇಂದ್ರ ಪುಣಚ ಇಲ್ಲಿನ ಶಿಕ್ಷಕಿ ಸರಸ್ವತಿ ಎನ್. ದಂಪತಿಗಳ ಪುತ್ರ.
ವಿಜ್ಞಾನ ವಿಭಾಗದಲ್ಲಿ ಆಗ್ನೇಯ ಅರ್ತಿಕಜೆ 565(94.16%) ಇವರು ಭೌತಶಾಸ್ತ್ರ-94, ರಸಾಯನಶಾಸ್ತ್ರ-89, ಗಣಿತ-95,ಗಣಕ ವಿಜ್ಞಾನ -99, ಸಂಸ್ಕೃತ-100,ಇಂಗ್ಲಿಷ್-88 ಅಂಕಗಳನ್ನು ಗಳಿಸಿಅತ್ಯುತ್ತಮ ಸಾಧನೆಯನ್ನು ಮಾಡಿರುತ್ತಾರೆ. ಇವರು ಪುತ್ತೂರಿನ ಪರ್ಲಡ್ಕ ನಿವಾಸಿಗಳಾದ ನಟರಾಜ ಅರ್ತಿಕಜೆ ಮತ್ತು ಶಶಿಕಲಾ ಎ. ದಂಪತಿಗಳ ಪುತ್ರ. ಈ ವಿದ್ಯಾರ್ಥಿಗಳನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು .
ಈ ಸಮಾರಂಭದಲ್ಲಿ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಜೊತೆ ಕಾರ‍್ಯದರ್ಶಿ ರೂಪಲೇಖ ಇವರು ಸನ್ಮಾನಿಸಿ ಶುಭಹಾರೈಸಿದರು.ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀಕಾಂತ ಕೊಳತ್ತಾಯ,ಸಂಚಾಲಕ ಸಂತೋಷ ಬಿ., ಕೋಶಾಧಿಕಾರಿಗಳಾದ ಸಂಪತ್ ಕುಮಾರ್, ಸದಸ್ಯರಾದ ಉಮೇಶ್ ನಾಯಕ್, ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ , ಹಿರಿಯ ಸಾಹಿತಿಗಳಾದ ಪ್ರೊ. ವಿ.ಬಿ. ಅರ್ತಿಕಜೆ, ಉಪನ್ಯಾಸಕರು , ಸಿಬ್ಬಂದಿ ವರ್ಗದವರು, ಮತ್ತು ವಿದ್ಯಾರ್ಥಿಗಳ ಹೆತ್ತವರು ಉಪಸ್ಥಿತರಿದ್ದು, ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳಾದ ಶ್ರೀಶ ಕುಮಾರ್ ಎಸ್., ಗುರುದೀಪ್ ಎನ್. , ಆಗ್ನೇಯ ಅರ್ತಿಕಜೆ ಅವರನ್ನು ಅಭಿನಂದಿಸಿ,ಸನ್ಮಾನಗೈದು ಅವರ ಉಜ್ವಲ ಭವಿಷ್ಯಕ್ಕೆ ಶುಭಹಾರೈಸಿದರು. ಉಪನ್ಯಾಸಕರಾದ ಮಧುರಾ ಕಾರ‍್ಯಕ್ರಮವನ್ನು ನಿರೂಪಿಸಿದರು.