
ಪುತ್ತೂರು: ಸುಳ್ಯದ ಯುವ ಪ್ರತಿಭೆ, ಸಂಗೀತ ನಿರ್ದೇಶಕ ಮಯೂರ್ ಅಂಬೆಕಲ್ಲು ನಿರ್ದೇಶಿಸಿದ ಭಾವ ತೀರ ಯಾನ ಕನ್ನಡ ಚಲನಚಿತ್ರ ಪುತ್ತೂರಿನ ಭಾರತ್ ಮಹಲ್ ನಲ್ಲಿ 50 ನೇ ದಿನಕ್ಕೆ ಕಾಲಿರಿಸಿದ ಹಿನ್ನಲೆಯಲ್ಲಿ ಸಿನಿಮಾ ತಂಡದಿಂದ ಸಂಭ್ರಮ ಆಚರಣೆ ಎ. 11 ರಂದು ಮಧ್ಯಾಹ್ನ ಪುತ್ತೂರು ಭಾರತ್ ಮಹಲ್ ನಲ್ಲಿ ನಡೆಯಿತು.
ಕೇಕ್ ಕತ್ತರಿಸುವ ಮೂಲಕ ಸಂಭ್ರಮಾಚರಣೆ ಮಾಡಲಾಯಿತು. ಭಾವ ತೀರ ಯಾನ ಚಲನಚಿತ್ರಕ್ಕೆ ಸಂಗೀತ ನೀಡಿ, ನಿರ್ದೇಶನಗೈದ ಮಯೂರ್ ಅಂಬೆಕಲ್ಲು, ನಾಯಕ ನಟ ತೇಜಸ್ ಕಿರಣ್, ನಟ ಸಂದೀಪ್ ರಾಜ್ ಗೋಪಾಲ್, ನಾಯಕಿ ಆರೋಹಿ ನೈನಾರ ಮಾತನಾಡಿ, ಪುತ್ತೂರಿನಲ್ಲಿ 50 ನೇ ದಿನಕ್ಕೆ ಕಾಲಿರಿಸಿದ ಭಾವ ತೀರ ಯಾನ ಚಲನಚಿತ್ರದ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಅಕಾಡೆಮಿ ಅಫ್ ಲಿಬರಲ್ ಎಜುಕೇಶನ್ ಸುಳ್ಯ ಇದರ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ ರವರು ಮಾತನಾಡಿ ಸುಳ್ಯದ ಪ್ರತಿಭೆ ಮಯೂರ್ ಅಂಬೆಕಲ್ಲು ರವರು ಒಂದು ಉತ್ತಮ ಸಿನಿಮಾ ನಿರ್ದೇಶಿಸಿ, ಇಂದು ಯಶಸ್ಸು ಪಡೆದಿರುವುದು ತುಂಬಾ ಸಂತೋಷ ತಂದಿದೆ ಎಂದು ಹೇಳಿ, ಚಿತ್ರ ತಂಡವನ್ನು ಗೌರವಿಸಿದರು. ರಂಗಭೂಮಿ ಕಲಾವಿದೆ ವಸಂತ ಲಕ್ಷ್ಮಿಯವರು ಶುಭಹಾರೈಸಿದರು. ಚಲನಚಿತ್ರ ನಿರ್ಮಾಪಕ ಶೈಲೇಶ್ ಅಂಬೆಕಲ್ಲು ಕಾರ್ಯಕ್ರಮ ನಿರೂಪಿಸಿದರು.