ಪುತ್ತೂರು: ಇಲ್ಲಿನ ಮುಖ್ಯರಸ್ತೆ ಮಹಾವೀರ ಆಸ್ಪತ್ರೆ ಬಳಿ ಇರುವ ಮಹಾವೀರ ವೆಂಚರ್ಸ್ನಲ್ಲಿ ಈಗ 25 ಕೆ ವಿ ಡಿ ಸಿ ವೇಗದ ಚಾರ್ಜರ್ ಜೊತೆಗೆ 22ಕೆ ವಿ ಎ ಸಿ ಚಾರ್ಜರ್ ವಿದ್ಯುತ್ ಕಾರುಗಳ ಅನುಕೂಲಕ್ಕಾಗಿ ಅಳವಡಿಸಲಾಗಿದೆ.

ಈ ಎರಡು ಚಾರ್ಜರ್ ಗಳು ರೆಸ್ಟೋರೆಂಟ್ ಲಾಡ್ಜ್, ಕೊಠಡಿಗಳು,ಸಮ್ಮೇಳನ ಸಭಾಂಗಣ,ರಿಲಯನ್ಸ್ ಟ್ರೆಂಡ್, ಆದರ್ಶ ಸೊಸೈಟಿ,ಪುತ್ತೂರು ಪಾಲಿ ಕ್ಲಿನಿಕ್,ಬಾಟ ಇದಕ್ಕೆ ಭೇಟಿ ನೀಡುವ ಗ್ರಾಹಕರಿಗೆ ಅನುಕೂಲವಾಗಲಿದೆ.
ಈ ಸಂದರ್ಭದಲ್ಲಿ ಇದರ ಅಳವಡಿಕೆಗೆ ಸಹಕರಿಸಿದ ಮೆಸ್ಕಾಂ ಪುತ್ತೂರು,ಸುಧಾ ಎಲೆಕ್ಟ್ರಿಕಲ್, ಆದಿತ್ಯ ಸರ್ವಿಸಸ್,ಜಿಕೆ ಕನ್ಸ್ಟ್ರಕ್ಷನ್, ಅರುಣ್ ಭಟ್ ಕೃಷಿ ಪಾಲಿಮರ್, ಮತ್ತು ಜಿಯಾನ್ ತಂಡಕ್ಕೆ ಧನ್ಯವಾದಗಳು ಅರ್ಪಿಸುತ್ತೇವೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.