ಜೆ.ಇ.ಇ ಮೈನ್ಸ್ 2 -2025 ಪ್ರವೇಶ ಪರೀಕ್ಷೆ : ವಿವೇಕಾನಂದ ಪ.ಪೂ ಕಾಲೇಜಿನ ವಿದ್ಯಾರ್ಥಿ ಸಹನ್‌ಕೆ.ಎಲ್.ಗೆ ರಾಷ್ಟ್ರ ಮಟ್ಟದಲ್ಲಿ 2545ನೇ ರ‍್ಯಾಂಕ್

0

ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

ಪುತ್ತೂರು: ಕೇಂದ್ರ ಸರಕಾರದ NTA ಪ್ರಾಧಿಕಾರವು ನಡೆಸುವ ರಾಷ್ಟ್ರ ಮಟ್ಟದ ಜೆ.ಇ.ಇ ಮೈನ್ಸ್-2025ರ ದ್ವಿತೀಯ ಹಂತದ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಸಹನ್‌ಕೆ.ಎಲ್(ಪುತ್ತೂರು -ಸುಳ್ಯಪದವಿನ ಲಕ್ಷ್ಮಣ್‌ಕೆ. ಹಾಗೂ ನಿರ್ಮಲಾ ಕೆ.ಎ ದಂಪತಿಯ ಪುತ್ರ) 99.28 ಪರ್ಸೆಂಟೈಲ್‌ನೊಂದಿಗೆ ರಾಷ್ಟ್ರ ಮಟ್ಟದಲ್ಲಿ 2545ನೇ ರ‍್ಯಾಂಕ್ ಪಡೆದಿರುತ್ತಾರೆ.ಜತೆಗೆ ನಾಲ್ವರು ವಿದ್ಯಾರ್ಥಿಗಳು ಮುಂದೆ ನಡೆಯಲಿರುವ JEE Advanced ಪ್ರವೇಶ ಪರೀಕ್ಷೆಯನ್ನು ಎದುರಿಸಲು ಅರ್ಹತೆಯನ್ನು ಪಡೆದಿರುತ್ತಾರೆ.


ಆಶಿಶ್‌ಎಸ್.ಜಿ 96.61 ಪರ್ಸೆಂಟೈಲ್(ಬೆಳ್ತಂಗಡಿ ತಾಲೂಕಿನ ಕೆ. ಶ್ಯಾಮರಾಜ ಶರ್ಮ ಹಾಗೂ ಗಂಗಾವೇಣಿ ದಂಪತಿಯ ಪುತ್ರ), ತನ್ಮಯ್ ಕೃಷ್ಣ ಜಿ.ಎಸ್95.73ಪರ್ಸೆಂಟೈಲ್(ನೇರಳಕಟ್ಟೆಯ ಗೋಪಾಲಕೃಷ್ಣ ಎನ್‌ಹಾಗೂ ಸ್ವಪ್ನಾ ಎನ್‌ದಂಪತಿಯ ಪುತ್ರ), ತೇಜಚಿನ್ಮಯ ಹೊಳ್ಳ 93.81ಪರ್ಸೆಂಟೈಲ್(ಎಸ್‌ಹರೀಶ್‌ಹೊಳ್ಳ ಹಾಗೂ ಸುಚಿತ್ರಾ ಎನ್. ದಂಪತಿಯ ಪುತ್ರ), ಅಭಿರಾಮ ಭಟ್92.21ಪರ್ಸೆಂಟೈಲ್(ಪಡ್ನೂರಿನ ನಾರಾಯಣ ಪ್ರಸಾದ್‌ಪಿ. ಎಸ್‌ಹಾಗೂ ರಮ್ಯಾ ಕಾವೇರಿ ದಂಪತಿಯ ಪುತ್ರ), ಅಭಿಷೇಕ್‌ಡಿ ಭಟ್91.95 ಪರ್ಸೆಂಟೈಲ್(ಕುಮಟಾದ ದತ್ತಾತ್ರೇಯ ನಾರಾಯಣ ಭಟ್‌ಹಾಗೂ ಸಾವಿತ್ರಿ ಡಿ ಭಟ್‌ದಂಪತಿಯ ಪುತ್ರ) ಪಡೆದಿರುತ್ತಾರೆ. ಇವರನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಅಭಿನಂದಿಸಿರುತ್ತಾರೆ.

LEAVE A REPLY

Please enter your comment!
Please enter your name here