ವರ್ಣಕುಟೀರದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ

0

ಪುತ್ತೂರು: ಕಳೆದ ಒಂದು ವಾರದಿಂದ ವರ್ಣಕುಟೀರದಲ್ಲಿ ನಡೆದ ಮಕ್ಕಳ ಬೇಸಿಗೆ ಶಿಬಿರ ಎ.18ರಂದು ಸಮಾರೋಪಗೊಂಡಿತು.


ಕಾಡು ಬಯಲು ರಂಗ ಮಂದಿರದ ಸಂಚಾಲಕ ರಾಘವೇಂದ್ರ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಇಲ್ಲಿ ಎಲ್ಲರು ಸಮಾನರು. ಸಮಾನತೆಯನ್ನು ಶಿಬಿರ ಕಲಿಸುತ್ತದೆ. ಮಕ್ಕಳು ಸಂತೋಷದಿಂದ ಇದ್ದಾರೆ. ಈ ನಿಟ್ಟಿನಲ್ಲಿ ಶಿಬಿರ ಚೆನ್ನಾಗಿ ಮೂಡಿ ಬಂದಿದೆ ಎಂದರ್ಥ ಎಂದರು.


ಹಿಂದೂಸ್ಥಾನಿ ಸಂಗೀತ ಅಧ್ಯಾಪಕಿ ಶಾರದಾ ಭಟ್ ಅವರು ಮಾತನಾಡಿ, ವರ್ಣಕುಟೀರದಲ್ಲಿ ನಾನು ಮಕ್ಕಳಿಗಾಗಿ ಹಿಂದೂಸ್ಥಾನಿ ಸಂಗೀತ ಹೇಳಿಕೊಡುತ್ತೇನೆ. ಇಲ್ಲಿನ ವಾತಾವರಣ ತುಂಬಾ ಹಿಡಿಸಿದೆ ಎಂದರು. ಪೈ ಸರ್ಜಿಕಲ್‌ನ ಮಾಲಕ ರವೀಂದ್ರ ಪೈ ಅವರು ಮಾತನಾಡಿ, ಪ್ರತಿ ವರ್ಷ ನಾನು ಶಿಬಿರವನ್ನು ಗಮನಿಸುತ್ತಿದ್ದೇನೆ. ಪ್ರತಿ ವರ್ಷ ಹೊಸತನವನ್ನು ಮಾಡುತ್ತಾರೆ ಎಂದರು.


ವರ್ಣಕುಟೀರ ಸಂಸ್ಥೆಯ ಅಧ್ಯಕ್ಷೆ ಗೀತಾ ಲಕ್ಷ್ಮಿ ಕದಿಮಾರು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಬಿರ ಚೆನ್ನಾಗಿ ಮೂಡಿ ಬಂದಿದೆ. ಹೆತ್ತವರ ಸಹಕಾರವೇ ಇದಕ್ಕೆ ಕಾರಣ ಎಂದು ಹೇಳಿದರು. ವರ್ಣಕುಟೀರ ಕಲಾ ಶಾಲೆಯ ಸಂಚಾಲಕ ಪ್ರವೀಣ್ ವರ್ಣಕುಟೀರ ಅವರು ಮಾತನಾಡಿ, ಮಕ್ಕಳಿಗಾಗಿ ಮುಂದಿನ ಹಲವು ಯೋಜನೆಗಳ ಕುರಿತು ಮಾತನಾಡಿದರು.

ಪೋಷಕರು ನಮ್ಮ ಸಂಸ್ಥೆಗೆ ಪೂರ್ಣ ಸಹಕಾರ ನೀಡಿದ್ದಾರೆ. ಅವರಿಗೆ ನಾನು ಋಣಿಯಾಗಿದ್ದೇನೆ ಎಂದರು. ಸಂಸ್ಥೆಯ ಸಂಚಾಲಕ ಪ್ರವೀಣ್ ವರ್ಣಕುಟೀರ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾರೋಪ ಸಮಾರಂಬದ ಕೊನೆಯಲ್ಲಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ರಂಗ ಸಂಗೀತ, ಚಲನಚಿತ್ರ ಗೀತೆ, ಮೈಮ್ ಕೋ, ಕೊನೆಗೆ ನೀನಾಸಂನ ಗಣೇಶ್ ಬೀಮನಕೋಣೆ ಅವರ ನಿರ್ದೇಶನದಲ್ಲಿ ಒಂದು ಕಾಡಿನ ಕಥೆ ಎಂಬ ನಾಟಕ ಪ್ರದರ್ಶನಗೊಂಡಿತು.

ಪೋಷಕರೊಬ್ಬರು ಅನಿಸಿಕೆ ವ್ಯಕ್ತಪಡಿಸಿ ವರ್ಣಕುಟೀರಕ್ಕೆ ನನ್ನ ಮಗ ಬಂದ ಬಳಿಕ ಆತನ ಪೂರ್ಣ ಬದಲಾಗಿದ್ದಾನೆ. ನನ್ನ ಮಗ ಈಗ ಮೊಬೈಲ್‌ನಿಂದ ದೂರ ಇದ್ದಾನೆ. ಇದು ನನಗೆ ತುಂಬ ಸಂತೋಷ ಆಗಿದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here