ಪುತ್ತೂರು: ಸುಮಾರು 5 ವರ್ಷಗಳ ಹಿಂದೆ ಪುರುಷರಕಟ್ಟೆ ಹೋಟೆಲ್ ಉದಯಭಾಗ್ಯ ಇದರ ಮಹಡಿಯಲ್ಲಿ ಕಾರ್ಯಾಚರಿಸುತ್ತಿದ್ದ ಜೀವನ್ ಕುಮಾರ್ ನರಿಮೊಗರು ಮಾಲೀಕತ್ವದ ಜೆ.ಕೆ ಜಿಮ್ ಸೆಂಟರ್ ಫಿಟ್ ನೆಸ್ ಪ್ರಿಯರ ಅನುಕೂಲಕ್ಕಾಗಿ ಮತ್ತೊಮ್ಮೆ “ಹನಿ ಫಿಟ್ನ್ನೆಸ್” ಎನ್ನುವ ನೂತನ ಹೆಸರಿನ ಹೆಸರಿನಲ್ಲಿ ಮತ್ತೆ ಫಿಟ್ನೆಸ್ ಪ್ರಿಯರಿಗೆ ಸಿಹಿ ಸುದ್ದಿ ನೀಡಿದೆ.
ಪುರುಷರಕಟ್ಟೆ ಅಭಯ್ ಮಾರ್ಬಲ್ಸ್ ಸಮೀಪದ ಬಾಳಯ ಸಂಕೀರ್ಣದಲ್ಲಿ ನೂತನ ಜಿಮ್ ಸೆಂಟರ್ ಏ.21ರಂದು ಶುಭಾರಂಭಗೊಂಡು ಗ್ರಾಹಕರ ಸೇವೆಗೆ ತಯಾರಾಗಿದೆ. ಹನಿ ಸಮೂಹ ಸಂಸ್ಥೆಯ ಮಾಲೀಕ ಜೀವನ್ ಕುಮಾರ್ ಇವರ ಮಕ್ಕಳಾದ ಸುಹಾನಿ ಮತ್ತು ಪ್ರಣವಿ ದೀಪ ಪ್ರಜ್ವಲನೆ ಮೂಲಕ ಜಿಮ್ ಸೆಂಟರ್ ಉದ್ಘಾಟನೆ ನೆರವೇರಿಸಿದರು. ಈ ವೇಳೆ ಮಾಲೀಕರ ತಾಯಿ ಸುಶೀಲಾ ನರಿಮೊಗರು, ಭಾವ ನರಿಮೊಗರು ಯಶಸ್ವಿನಿ ಎಲೆಕ್ಟ್ರಾನಿಕ್ಸ್ ಮಾಲೀಕ ಲವಕುಮಾರ್, ಕ್ರೂಜ್ ವಾಷಿಂಗ್ ಸೆಂಟರ್ ಮಾಲೀಕ ಸಲೀಂ, ಬಾಳಯ ಸಂಕೀರ್ಣದ ಮಾಲೀಕ ಅಬ್ದುಲ್ ರಹಿಮಾನ್ ಬಾಳಯ, ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಲೋಕೇಶ್ ಕುಲಾಲ್, ಭರತ್ ರಾಜ್ ಬೆಂಗಳೂರು, ಲಕ್ಷ್ಮೀಶ ಪುತ್ತೂರು, ಚಿನ್ಮಯಿ ಪುತ್ತೂರು, ಇಮಾಂಶ್ ಶರ್ಮ ಬನ್ನೂರು, ಕಿಶನ್ ಕುಮಾರ್ ಕಾರ್ಜಾಲು ,ಮುರಳಿ ಪುತ್ತೂರು ಹಾಗೂ ಜಿಮ್ ಟ್ರೈನರ್ ಪ್ರಸನ್ನ ಸಹಿತ ಹಲವರು ಹಾಜರಿದ್ದರು. ವಿಜೇತ ಜೀವನ್ ಎಲ್ಲರನ್ನೂ ಸ್ವಾಗತಿಸಿದರು.
ಬಳಿಕ ಮಾತನಾಡಿದ ಜೀವನ್ ಕುಮಾರ್, ಹನಿ-ಹನಿ ಫಿಟ್ನೆಸ್ ಸೆಂಟರ್ ಸಂಪೂರ್ಣ ಹವಾನಿಯಂತ್ರಿತ ವಾಗಿದ್ದು ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಬ್ಯಾಚುನ್ನು ಪ್ರಾರಂಭಿಸಿ ,ನುರಿತ ತರಬೇತುದಾರರ ಮೂಲಕ ತರಬೇತಿ ನೀಡಲಾಗುತ್ತದೆ. ತ್ರೆಡ್ಮಿಲ್, ಸೈಕ್ಲಿಂಗ್ ಇನ್ನೂ ಹಲವಾರು ಬಗೆಯ ಕಸರತ್ತುಗಳನ್ನು ಹಾಗೂ ಫಿಟ್ನಸ್ ತರಬೇತಿಯನ್ನು ಇಲ್ಲಿ ನೀಡಲಾಗುವುದು.
ಮುಂಜಾನೆ 5 ರಿಂದ 9 ರವರೆಗೆ ಸಂಜೆ 4ರಿಂದ 9.30 ತನಕ ಮಳಿಗೆ ತೆರೆದಿದ್ದು , ಶುಭಾರಂಭದ ಪ್ರಯುಕ್ತ ಹೊಸ ಕೊಡುಗೆಗಳನ್ನು ಘೋಷಣೆ ಮಾಡಿದ್ದೇವೆ.
ಜೆ.ಕೆ ಜಿಮ್ ಸೆಂಟರ್ ಇದರ ಹಳೇಯ ಮೆಂಬರ್ಶಿಪ್ ಹೊಂದಿರುವಂತ ಗ್ರಾಹಕರಿಗೆ ಮಾಸಿಕ ಶುಲ್ಕ ರೂ.900 ಹಾಗೂ ಉಚಿತ ಸದಸ್ಯತ್ವ , ಮೂರು ತಿಂಗಳಿಗೆ ರೂ.2400 ಹಾಗೂ ಸದಸ್ಯತ್ವ ಮತ್ತು
6 ತಿಂಗಳ ಶುಲ್ಕವು 4300 ಜೊತೆಗೆ ಸದಸ್ಯತ್ವ ಮತ್ತು ವಾರ್ಷಿಕ ಶುಲ್ಕ ರೂ. 8000 ಮತ್ತು ಮೆಂಬರ್ಶಿಪ್ ಇರುತ್ತದೆ. ಆಸಕ್ತರು ಇದರ ಪ್ರಯೋಜನ ಪಡೆಯುವಂತೆ ಅವರು ವಿನಂತಿಸಿದ್ದಾರೆ. ಇನ್ನೂ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9740194784 ಕರೆ ಮಾಡುವಂತೆ ತಿಳಿಸಿದ್ದಾರೆ.