ಪುತ್ತೂರು: ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷೆ, ಸಮಾಜ ಸೇವಕಿ, ನಫೀಸಾ ಪೆರುವಾಯಿ ಅವರು ಸ್ಪೂರ್ತಿಧಾಮ ಸಂಸ್ಥೆ ವತಿಯಿಂದ ನೀಡಲ್ಪಡುವ ಪ್ರತಿಷ್ಠಿತ ಬೋಧಿವರ್ಧನ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಅಂಬೇಡ್ಕರ್ ಜಯಂತಿ ದಿನವಾದ ಎ.14ರಂದು ಬೆಂಗಳೂರು ಅಂಜನನಗರದಲ್ಲಿರುವ ಸ್ಪೂರ್ತಿಧಾಮದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸನ್ಮಾನದೊಂದಿಗೆ ಪ್ರಮಾಣಪತ್ರ ಹಾಗೂ ರೂ.25 ಸಾವಿರ ನಗದು ಸ್ವೀಕರಿಸಿದರು. ಮಾಜಿ ಸ್ಪೀಕರ್ ಕೆ.ಆರ್ ರಮೇಶ್ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು. ನಫೀಸಾ ಪೆರುವಾಯಿ ಮಾತ್ರವಲ್ಲೇ ಇತರ ಐದು ಮಂದಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಫೀಸಾ ಪೆರುವಾಯಿ ಅವರು ಗ್ರಾಮದಲ್ಲಿ ಸ್ವಚ್ಛತೆ ವಿಚಾರದಲ್ಲಿ ಗಮನಾರ್ಹ ಸೇವೆ ಸಲ್ಲಿಸುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದರು.