ಪುತ್ತೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ನಗರ ವ್ಯಾಪ್ತಿಯ ಎಲ್ಲಾ ಸೊತ್ತುಗಳ ದಾಖಲೆಗಳ ಡಿಜಿಟಲೀಕರಣ ಮತ್ತು ಫಾರಂ 3 ವಿತರಣೆ ಗೆ ಅರ್ಜಿ ಸ್ವೀಕರಿಸುವ ಅವಧಿ ಮೇ 10 ನೇ ತಾರೀಕಿಗೆ ಕೊನೆಗೊಳ್ಳಲಿದ್ದು ಅವಧಿ ವಿಸ್ತರಣೆ ಮಾಡುವಂತೆ ಪೌರಾಡಳಿತ ಇಲಾಖೆಗೆ ಸುಳ್ಯ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ. ಎಂ. ಮುಸ್ತಫ, ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಎಂ. ವೆಂಕಪ್ಪಗೌಡ ಬೆಂಗಳೂರಿನಲ್ಲಿ ಮನವಿ ಸಲ್ಲಿಸಿದರು.
ತಾಂತ್ರಿಕ ತೊಂದರೆಗಳಿಂದ, ಎಸ್ಎಂಆರ್ ತಂತ್ರಾಂಶ ವಿಭಾಗದಿಂದ ಬಂದ ಮೊದಲಿನ ಆದೇಶದಂತೆ 5 ವರ್ಷಗಳ ಇಸಿ ಕೊಟ್ಟವರು ಇನ್ನಷ್ಟು ಅಧಿಕ ವರ್ಷದ ಇಸಿ ಅಪ್ಲೋಡ್ ಮಾಡಬೇಕಾದ ಅನಿವಾರ್ಯತೆ, ಈಗಾಗಲೇ ಸ್ವತ್ತಿನ ಐಡಿ ನಂಬ್ರ ಹೊಂದಿರುವವರಿಗೆ ಇರುವ ಆಡಚಣೆಗಳಿಂದ ಅರ್ಜಿ ಸಲ್ಲಿಕೆ ಮತ್ತು ವಿಲೇವಾರಿ ವಿಳಂಬವಾಗುತ್ತಿದ್ದು, ಅವಧಿ ವಿಸ್ತರಣೆಯಿಂದ ಹೆಚ್ಚಿನ ಜನರಿಗೆ ಪ್ರಯೋಜನವಾಗಲಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.