ಪುತ್ತೂರು: ವ್ಯಾಪಾರ ಎಲ್ಲರೂ ಮಾಡುತ್ತಾರೆ. ಆದರೆ ಮಹಮ್ಮದ್ ಅವರಂತೆ ವ್ಯಾಪಾರ ಮಾಡಲು ಎಲ್ಲರಿಗೂ ಸಾಧ್ಯವಿಲ್ಲ. ಯಾಕೆಂದರೆ ಅವರು ವ್ಯಾಪಾರ ವ್ಯವಹಾರದಲ್ಲಿ ಅಷ್ಟೊಂದು ಪ್ರಾಮಾಣಿಕರಾಗಿದ್ದರು ಎಂದು ನ್ಯಾಯವಾದಿ ಕುಂಬ್ರ ದುರ್ಗಾ ಪ್ರಸಾದ್ ರೈ ಅಭಿಪ್ರಾಯಪಟ್ಟರು. ಇತ್ತೀಚೆಗೆ ನಿಧನರಾದ ಕುಂಬ್ರದ ಹಿರಿಯ ವರ್ತಕ ಯಸ್.ಐ ಮಹಮ್ಮದ್ ಅವರ ಶ್ರದ್ದಾಂಜಲಿ ಸಭೆಯಲ್ಲಿ ಅವರು ನುಡಿ ನಮನ ಸಲ್ಲಿಸಿದರು. ಸಭೆಯು ಸಂಘದ ಅಧ್ಯಕ್ಷರಾದ ಮಹಮ್ಮದ್ ಪಿ ಕೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮ್‌ಸುಂದರ ರೈ ಕೊಪ್ಪಳ ಮಾತನಾಡಿ, ವ್ಯಾಪಾರದೊಂದಿಗೆ ಪ್ರಾಮಾಣಿಕತೆಯನ್ನು ತನ್ನ ಜೀವನದುದ್ದಕ್ಕೂ ಮೈಗೂಡಿಸಿಕೊಂಡಿದ್ದ ಇವರು ಓರ್ವ ಕ್ರಿಕೆಟ್ ಅಭಿಮಾನಿಯಾಗಿದ್ದು ರೇಡಿಯೋ ಮೂಲಕ ಕಮೆಂಟರಿ ಕೇಳುವ ಹವ್ಯಾಸ ಬೆಳೆಸಿಕೊಂಡಿದ್ದು ಒಮ್ಮೆಯೂ ಕೂಡ ಒಬ್ಬನೇ ಒಬ್ಬ ಗ್ರಾಹಕನಲ್ಲಿ ಅವರು ಜಗಳ ಮಾಡಿ ಇರಲಿಕ್ಕಿಲ್ಲ ಎಂದು ಶಾಮ್ ಸುಂದರ್ ರೈ ಅವರ ಗುಣಗಾನ ಮಾಡಿದರು.

ವಾಗ್ಮಿ ಕೆ. ಆರ್ ಹುಸೈನ್ ದಾರಿಮಿ ರೆಂಜಾಲಾಡಿ ಮಾತನಾಡಿ, ಎಲ್ಲಕ್ಕಿಂತಲೂ ದೊಡ್ಡ ಧರ್ಮ ಹಸಿದವರಿಗೆ ಅನ್ನ ನೀಡುವುದು ಆಗಿದ್ದು, ಸಾಲ ಎಂದು ಬಂದ ಯಾರನ್ನೂ ಹಣ ಇಲ್ಲ ಎಂಬ ಕಾರಣಕ್ಕೆ ದಿನಸಿ ಕೊಡದೆ ಹಿಂತಿರುಗಿಸದೇ ಇದ್ದ ಓರ್ವ ಉತ್ತಮ ವ್ಯಕ್ತಿಯೊಬ್ಬರು ತೀರಿದ ಮೇಲೆ ಅವರ ಗುಣಗಾನ ಮಾಡುವುದು ಪುಣ್ಯದ ಕಾರ್ಯ ಆಗಿದೆ ಎಂದರು.ಯಸ್.ಐ ಮಹಮ್ಮದ್‌ರವರ ಪುತ್ರ ಕರ್ನಾಟಕ ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಇಬ್ರಾಹಿಂ ಮಾಸ್ಟರ್ ಮಾತನಾಡಿ, ನಮ್ಮ ತಂದೆಯವರು 55 ವರ್ಷಗಳ ಕಾಲ ವ್ಯಾಪಾರ ಮಾಡಿದ್ದಾರೆ ಗಳಿಸುವುದಾದರೆ ಎಷ್ಟೋ ಉಳಿಸಬಹುದಿತ್ತು. ಆದರೆ ಅವರು ಪ್ರಾಮಾಣಿಕವಾಗಿ ದಿನ ಕಳೆಯಲು ಬೇಕಾದಷ್ಟು ಮಾತ್ರ ಸಂಪಾದಿಸಿದ್ದು ಅವರು ಮರಣ ಹೊಂದುವಾಗ ಉಳಿಸಿ ಕೊಂಡದ್ದು ಏನು ಇಲ್ಲ ಆದರೂ ಮಕ್ಕಳಾದ ನಮಗೆ ಪ್ರಾಮಾಣಿಕ ಜೀವನ ನಡೆಸುವುದನ್ನೇ ಹೇಳಿ, ಕಲಿಸಿ ಹೋಗಿದ್ದಾರೆ ಎಂದರು. ರಂಗಭೂಮಿ ಕಲಾವಿದ ಸುಂದರ್ ರೈ ಮಂದಾರ ಸಂದರ್ಭೋಚಿತವಾಗಿ ಮಾತನಾಡಿ ನುಡಿ ನಮನ ಸಲ್ಲಿಸಿದರು.
ಸಂಘದ ಮಾಜಿ ಅಧ್ಯಕ್ಷ ನಾರಾಯಣ ಪೂಜಾರಿ ಸ್ವಾಗತಿಸಿ, ಕಾರ್ಯದರ್ಶಿ ಭವ್ಯ ರೈ ವಂದಿಸಿದರು. ಸಂಶುದ್ದೀನ್ .ಎ. ಆರ್ ಕಾರ್ಯಕ್ರಮ ನಿರೂಪಿಸಿದರು. ಮೆಲ್ವಿನ್ ಮೊಂತೆರೋ, ದಿವಾಕರ ಶೆಟ್ಟಿ, ಎಸ್.ಮಾಧವ ರೈ ಕುಂಬ್ರ, ದಿನೇಶ್ ಕಂಪ, ಸದಾಶಿವ ನಾಯ್ಕ, ಚರಿತ್ ಕುಮಾರ್, ಹನೀಫ್ , ಬಾಲಕೃಷ್ಣ ಪಾಟಾಳಿ, ಸಂಪತ್ ಕುಮಾರ್, ಇಬ್ರಾಹಿಂ , ಆಲಿ ಕುಂಜಿ ಗಟ್ಟಮನೆ, ಯೂಸುಫ್ ಉಜಿರೋಡಿ ಸಹಿತ ಹಲವರು ಉಪಸ್ಥಿತರಿದ್ದರು.