ಪುತ್ತೂರು: ವಾಯುಸೇನೆಗೆ ಆಯ್ಕೆಯಾದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಹಿರಿಯ ವಿದ್ಯಾರ್ಥಿಗಳಾದ ಆಶಿಶ್ ಶಂಕರ್, ಕೀರ್ತನ್.ಕೆ ಅವರಿಗೆ ಸನ್ಮಾನ ಕಾರ್ಯಕ್ರಮ ಡಿ.16ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಸಲಾಯಿತು.
ಆಶಿಶ್ ಶಂಕರ್ AF- CAT Exam ಬರೆದು ಭಾರತೀಯ ವಾಯುಪಡೆಗೆ ಆಯ್ಕೆಯಾಗಿದ್ದು, ಹೈದರಾಬಾದ್ ನಲ್ಲಿ ನಡೆಯುವ ತರಬೇತಿಗಾಗಿ ತೆರಳಲಿದ್ದಾರೆ. ಅವರು ವೆಂಕಟಕೃಷ್ಣ ಮತ್ತು ಶ್ರೀಮತಿ ಸುಜಾತ ದಂಪತಿಗಳ ಪುತ್ರ.
ಕೀರ್ತನ್.ಕೆ ರವರು Airman Y Service ಪರೀಕ್ಷೆ ಬರೆದು ಭಾರತೀಯ ವಾಯುಸೇನೆಗೆ ಆಯ್ಕೆಯಾಗಿದ್ದು, 6ತಿಂಗಳ ತರಬೇತಿಯನ್ನು AT School ಬೆಳಗಾವಿಯಲ್ಲಿ ಪಡೆಯಲಿದ್ದಾರೆ. ಪದ್ಮಯ್ಯ ಗೌಡ ಮತ್ತು ಶ್ರೀಮತಿ ಪುಷ್ಪಲತಾ ದಂಪತಿಗಳ ಪುತ್ರ.
ಈ ಸಂದರ್ಭದಲ್ಲಿ ಆಶಿಶ್ ಶಂಕರ್, ಕೀರ್ತನ್.ಕೆ ಮಾತನಾಡಿ,ಅನಿಸಿಕೆ ವ್ಯಕ್ತಪಡಿಸಿದರು.
ಶಾಲಾ ಸಂಚಾಲಕ ರವಿನಾರಾಯಣ.ಎಂ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು, ಸಂಚಾಲಕರು, ಸದಸ್ಯರು, ಮುಖ್ಯೋಪಾಧ್ಯಾಯರು ಹಾಗೂ ಸನ್ಮಾನಿಸಲ್ಪಟ್ಟ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು. ಶಾಲಾ ಬಸ್ ಸಾರಥಿಗಳು ಸಾಧಕ ಪ್ರತಿಭೆಗಳನ್ನು ಹೂಗುಚ್ಛ ನೀಡಿ ಅಭಿನಂದಿಸಿದರು. ಶಾಲಾ ಅಧ್ಯಕ್ಷ ಡಾ. ಶಿವಪ್ರಕಾಶ್.ಎಂ. ರವರು ಅಧ್ಯಕ್ಷೀಯ ನುಡಿಗಳನ್ನಾಡಿದರು. ಮುಖ್ಯೋಪಾಧ್ಯಾಯ ಸತೀಶ್ ಕುಮಾರ್ ರೈ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಶಾಲೆಯ ಸಮಸ್ತರ ಪರವಾಗಿ ಸಾಧಕ ಹಿರಿಯ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಯಶಸ್ಸನ್ನು ಕೋರಿದರು.
ಕಾರ್ಯಕ್ರಮದ ಅಂಗವಾಗಿ ವಿವಿಧ ವಿಜೇತರಾದ ಶಾಲಾ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿ ಸಾಧಕರಿಂದ ಬಹುಮಾನ ವಿತರಿಸಲಾಯಿತು.ಹಿರಿಯ ಶಿಕ್ಷಕಿ ಪುಷ್ಪಲತಾ. ಬಿ.ಕೆ ವೈಯಕ್ತಿಕ ಗೀತೆ ಹಾಡಿದರು. ಶಾಲಾ ಶಿಕ್ಷಕಿ ಶಾಂತಿ ಸ್ವಾಗತಿಸಿ, ಹಿರಿಯ ಶಿಕ್ಷಕ ರಾಧಾಕೃಷ್ಣ ರೈ ವಂದಿಸಿ, ಶಿಕ್ಷಕಿ ಯಶೋಧ ಕಾರ್ಯಕ್ರಮ ನಿರೂಪಿಸಿದರು.