ನಾಳೆ(ಎ.28) ಈಶ್ವರಮಂಗಲ ಅಮ್ಮಂಕಲ್ಲುನಲ್ಲಿ ಶ್ರೀದೇವಿ ಮಹಾತ್ಮೆ ಯಕ್ಷಗಾನ, ಸನ್ಮಾನ

0

ಪುತ್ತೂರು:ಈಶ್ವರಮಂಗಲದ ಮೇನಾಲ ಕೊಂಬೆಟ್ಟು ಅಮ್ಮಂಕಲ್ಲುನಲ್ಲಿ ಸಂಜೆ 5.30ರಿಂದ ಹೆಸರಾಂತ ಕಲಾವಿದರಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಹಾಗೂ ಸನ್ಮಾನ ಕಾರ್ಯಕ್ರಮಗಳು ಎ.28ರಂದು ನಡೆಯಲಿದೆ.


ಯಕ್ಷಗಾನ ಕಲಾವಿದ ನಾಟ್ಯ ಮಯೂರಿ ಖ್ಯಾತಿಯ ಕೊಕ್ಕಡ ಈಶ್ವರ ಭಟ್‌ರವರಿಗೆ ಸನ್ಮಾನ ನಡೆಯಲಿದೆ. ಯಕ್ಷಗಾನ ಬಯಲಾಟದಲ್ಲಿ ಮುಮ್ಮೇಳನದಲ್ಲಿ ಭಾಗವತರಾಗಿ ಹೊಸಮೂಲೆ ಗಣೇಶ್ ಭಟ್, ಕಾವ್ಯಶ್ರೀ ಆಜೇರು, ಚೆಂಡೆ ಮದ್ದಳೆಯಲ್ಲಿ ವೇಣುಗೋಪಾಲ ಭಟ್ ಮಾಂಬಾಡಿ, ವಿಕ್ರಂ ಮಯ್ಯ, ವರ್ಷಿತ್, ಚಕ್ರತಾಳದಲ್ಲಿ ಅರ್ಪಿತ್ ಕೂಡ್ಲು, ಸ್ತ್ರೀಪಾತ್ರದಲ್ಲಿ ಸರವು ರಮೇಶ್ ಭಟ್, ಸೀತಂಗೋಳಿ, ಬಾಲಕೃಷ್ಣ, ನವೀನ್‌ ಚಂದ್ರ, ಹಾಸ್ಯದಲ್ಲಿ ಮಹಾಬಲೇಶ್ವರ ಭಟ್ ಭಾಗಮಂಡಲ, ಸುಬ್ರಹ್ಮಣ್ಯ ಭಟ್ ಪೆರುವೋಡಿ, ಮುಮ್ಮೇಳದಲ್ಲಿ ಗುಂಡಿಮಜಲು ಗೋಪಾಲ ಭಟ್, ಈಶ್ವರಪ್ರಸಾದ್ ಧರ್ಮಸ್ಥಳ, ಮುಖೇಶ್ ದೇವದಾರ್, ಸುರೇಶ್ ಬಾಯಾರು, ವಾಸುದೇವ ರೈ, ಸುನಿಲ್ ಪಲ್ಲಮಜಲು, ಉಜಿರೆ ಅಶೋಕ್ ಭಟ್, ರವಿ ಭಟ್ ನೆಲ್ಯಾಡಿ, ಕಿಶನ್ ಅಗ್ಗಿತ್ತಾಯ, ಸಂತೋಷ್ ಆಚಾರ್ಯ ಪಂಜಕಲ್ಲು, ಯತೀಶ್, ಸತೀಶ್ ಬೆಟ್ಟಂಪಾಡಿ, ರಾಧಾಕೃಷ್ಣ ನಾವಡ ಮಧೂರು, ಉಂಡೆಮನೆ ಶ್ರೀಕೃಷ್ಣ ಭಟ್, ಶಶಿಕಿರಣ್ ಕಾವು, ಕಿಶೋರ್ ಕೊಮೈ ಹಾಗೂ ಯಶಸ್ ಭಾಗವಹಿಸಿದ್ದಾರೆ. ಯಕ್ಷಗಾನವು ಸಂಜೆ ಗಂಟೆ 5.30ರಿಂದ ಪ್ರಾರಂಭವಾಗಲಿದೆ. ರಾತ್ರಿ 8 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಸುಮಂಗಲ ಮತ್ತು ಸುಬ್ರಹ್ಮಣ್ಯ ಭಟ್ ಅಮ್ಮಂಕಲ್ಲು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here