ಬಂಟರ ಸಂಘಕ್ಕೆ ಇನ್ನು ಕೆಲವೇ ದಿನಗಳಲ್ಲಿ ಜಮೀನು ಮಂಜೂರು- ಅಶೋಕ್ ಕುಮಾರ್ ರೈ
ಪುತ್ತೂರು: ಬಂಟರ ಸಂಘ ಪುತ್ತೂರು ತಾಲೂಕು ಇದರ ಆಶ್ರಯದಲ್ಲಿ ಬೆಟ್ಟಂಪಾಡಿ ಬಿಲ್ವಗಿರಿಯಲ್ಲಿ ನಡೆದ 45ವರ್ಷ ಮೇಲ್ಪಟ್ಟ ವಯೋಮಾನದ ಬಂಟರ ಕ್ರಿಕೆಟ್ ಪಂದ್ಯಾಟ ” ಬಂಟ್ ಲೇಜೆಂಡ್” ಸಮಾರೋಪ ಸಮಾರಂಭ ನಡೆಯಿತು.
ಮುಖ್ಯ ಅತಿಥಿ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಬಂಟರು ಸಮಾಜದ ಯಾವುದೇ ಒಳ್ಳೆ ಕೆಲಸಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ ನಾಯಕತ್ವ ಗುಣವನ್ನು ಹೊಂದಿದವರು. ಕಾವು ಹೇಮನಾಥ್ ಶೆಟ್ಟಿಯವರ ನೇತೃತ್ವದಲ್ಲಿ ಬಂಟರ ಈ ಕ್ರೀಡಾಕೂಟ ಎಲ್ಲರನ್ನೂ ಜೊತೆಗೂಡಿಸುವ ಪ್ರಯತ್ನ ಮಾಡಿದ್ದೀರಿ. ಇದು ತುಂಬಾ ಅನಿವಾರ್ಯವೂ ಆಗಿದೆ. ಬಂಟರ ಸಂಘಕ್ಕೆ ಇನ್ನು ಕೆಲವೇ ದಿನಗಳಲ್ಲಿ ಜಮೀನು ಮಂಜೂರು ಆಗಲಿದೆ. ಆ ಮೂಲಕ ನಾವೆಲ್ಲರೂ ಸೇರಿ ಬಂಟರನ್ನು ಒಟ್ಟು ಮಾಡೋಣ ಸಮಾಜದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳೋಣ ಎಂದು ಹೇಳಿ ಶುಭ ಹಾರೈಸಿದರು.
ಅಶೋಕ್ ಕುಮಾರ್ ರೈ ನಮಗೆ ಹೆಮ್ಮೆ- ಹೇಮನಾಥ ಶೆಟ್ಟಿ
ಅಧ್ಯಕ್ಷತೆ ವಹಿಸಿ ಮಾತನಾಡಿದ ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ್ ಶೆಟ್ಟಿ ಯವರು ಪುತ್ತೂರಿನ ಅಭಿವೃದ್ಧಿ ದಿಶೆಯಲ್ಲಿ ನಿರಂತರ ಕೆಲಸ ಮಾಡುತ್ತಿರುವ ಅಶೋಕ್ ಕುಮಾರ್ ರೈ ಯವರು ನಮಗೆ ಹೆಮ್ಮೆ. ಅವರ ಯೋಚನೆ ಯೋಜನೆ ಪುತ್ತೂರು ಅಭಿವೃದ್ಧಿ ಇದೆಲ್ಲವೂ ನಮ್ಮ ಸಮಾಜಕ್ಕೆ ಹೆಮ್ಮೆ. ಇಂತಹ ಉತ್ತಮ ಶಾಸಕರನ್ನು ಪಡೆದಿರುವ ನಮ್ಮ ಸಮಾಜ ಖುಷಿ ಪಡಬೇಕು. ಬಂಟ ಸಮಾಜ ಕಟ್ಟುವಲ್ಲಿಯೂ ನಮಗೆ ಸಂಪೂರ್ಣ ಸಹಕಾರ ನೀಡುತ್ತಿರುವುದಕ್ಕೆ ನಾವು ಆಭಾರಿಯಾಗಿದ್ದೇವೆ ಈ ಕ್ರೀಡಾ ಕೂಟದಿಂದ ಎಲ್ಲರಿಗೂ ಸಂತಸವಾಗಿದೆ. ಇನ್ನಷ್ಟು ಬದಲಾವಣೆಗಳೊಂದಿಗೆ ಮುಂದಿನ ವರ್ಷ ಇನ್ನಷ್ಟು ವಿಜ್ರಂಭಣೆಯಿಂದ ಮಾಡುತ್ತೇವೆ ಎಂದರು

ಸಂಪೂರ್ಣ ಸಹಕಾರ- ಶಶಿಕುಮಾರ್ ರೈ ಬಾಲ್ಯೊಟ್ಟು
ಬಂಟರ ಸಂಘದ ಮಾಜಿ ಅಧ್ಯಕ್ಷ ಶಶಿಕುಮಾರ್ ಕುಮಾರ್ ರೈ ಮಾತನಾಡಿ, ಒಳ್ಳೆಯ ಕ್ರೀಡಾಕೂಟ ಸಂಯೋಜನೆ ಮಾಡಿದ್ದೀರಿ. ನಿಮ್ಮ ಕೆಲಸಕ್ಕೆ ನಮ್ಮ ಸಂಪೂರ್ಣ ಸಹಕಾರವಿದೆ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿ ಇರ್ದೆ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಠಲ ರೈ ಬೈಲಾಡಿ , ಬಂಟರ ಸಂಘದ ಮಾಜಿ ಅಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತು, ಅನಿತಾ ಹೇಮನಾಥ್ ಶೆಟ್ಟಿ, ಭಾಗ್ಯೇಶ್ ರೈ, ಅವಿನಾಶ್ ರೈ ಕುಡ್ಚಿಲ,ನಿತ್ಯಾನಂದ ಶೆಟ್ಟಿ, ಸಂತೋಷ್ ಶೆಟ್ಟಿ, ರಾಧಾಕೃಷ್ಣ ರೈ ಪರಾರಿ ಅಲಂಕಾರು, ಜಯಪ್ರಕಾಶ್ ರೈ ನೂಜಿಬೈಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತಂಡದ ಮಾಲಕರು ಪುರಂದರ ರೈ ಮಿತ್ರಂಪಾಡಿ, ಸೂರ್ಯನಾಥ ಆಳ್ವ ಮಿತ್ತಳಿಕೆ, ಸತೀಶ್ ರೈ ಕಟ್ಟಾವು, ಶಿವಪ್ರಸಾದ್ ಶೆಟ್ಟಿ ಕಿನಾರ ಟೂರ್ನಮೆಂಟ್ ಅನ್ನು ಪ್ರಶಂಸಿಸಿ ಮಾತನಾಡಿದರು.
ಮ್ಯಾಚ್ ರೆಫ್ರಿ ಆಗಿ ಸುಧೀರ್ ರೈ ಮತ್ತು ಕಮೆಂಟ್ರೇಟರ್ ಕೆಲ್ಲಾಡಿ ಸತ್ಯನಾರಾಯಣ ರೈ, ಕಾರ್ಯಕ್ರಮ ನಿರ್ವಹಣೆ ಮಾಡಿದ ಮನ್ಮಥ ಶೆಟ್ಟಿ ಯನ್ನು ಅಭಿನಂದಿಸಲಾಯಿತು. ಅಂಪೈರ್ ಆಗಿ ೧ ದಿವಿನ್ ಶೆಟ್ಟಿ, ಸಾತ್ವಿಕ್ ಮತ್ತು ಸ್ಕೋರ್ರ್ ಕೀರ್ತನ್ ಮಚ್ಚಿಮಲೆ ಸಹಕರಿಸಿದರು.
ಕಾರ್ಯಕ್ರಮದ ಸಂಯೋಜಕ ದಯಾನಂದ ರೈ ಕೋರ್ಮಂಡ ವಿಜೇತ ತಂಡವನ್ನು ಘೋಷಿಸಿದರು. ರಂಜಿನಿ ಶೆಟ್ಟಿ, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ತಿಲಕ್ ರೈ ಕುತ್ಯಾಡಿ , ಕಾರ್ಯಕ್ರಮ ಸಿಇಒ ಬೊಳಿಂಜಗುತ್ತು ರವಿಪ್ರಸಾದ್ ಶೆಟ್ಟಿ ಸಹಕರಿಸಿದರು.
ಬಂಟರ ಕ್ರಿಕೆಟ್ ಪಂದ್ಯಾಟ ಫಲಿತಾಂಶ
” ಬಂಟ್ ಲೆಜೆಂಡ್” ನಲ್ಲಿ ಪ್ರಥಮ-ಬಂಟ್ಸ್ ಛಾಲೆಂಜರ್ಸ್ ತಂಡ
ರನ್ರ್ಸ್- ಬಂಟ್ಸ್ ರೋಯಲ್ ತಂಡ
ಮ್ಯಾನ್ ಅಫ್ ಮ್ಯಾಚ್ – ಸಂದೀಪ್ ರೈ ಬೆಟ್ಟಂಪಾಡಿ
ಮ್ಯಾನ್ ಆಫ್ದಿ ಸೀರೀಸ್ ನಿಶಾಂತ್ ಆಳ್ವ
ಬೆಸ್ಟ್ ಬೌಲರ್ ನಿತೇಶ್ ಶೆಟ್ಟಿ ಮರ್ದಳ
ಬೆಸ್ಟ್ ಬಾಟ್ಸ್ ಮೆನ್ ರಾಕೇಶ್ ರೈ ಬೋಳೋಡಿ
ಎಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ಸು ಕಂಡಿದೆ
ಬಂಟ್ ಲೇಜೆಂಡ್ ಕಾರ್ಯಕ್ರಮ ಸಂಪೂರ್ಣ ಯಶಸ್ಸು ಕಂಡಿದೆ, ದಯಾನಂದ ರೈ ಕೋರ್ಮಂಡರವರ ಸಂಯೋಜನೆಯಲ್ಲಿ ಮೂಡಿಬಂದ ಈ ಕಾರ್ಯಕ್ರಮ ಬಂಟರ ಸಂಘಟನೆಗೆ ಇನ್ನಷ್ಟು ಬಲವನ್ನು ತಂದಿದೆ
ಮುಂದಿನ ವರ್ಷ ಮತ್ತಷ್ಟು ವಿಜೃಂಭಣೆ
ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರ ಪೂರ್ಣ ಸಹಕಾರ ಹಾಗೂ ಕಾರ್ಯಕ್ರಮದಲ್ಲಿ ಸಹಕರಿಸಿದ ಎಲ್ಲರ ಪ್ರೋತ್ಸಾಹದಿಂದ ಬಂಟ್ ಲೇಜೆಂಡ್ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಮುಂದಿನ ವರ್ಷ ಮತ್ತಷ್ಟು ವಿಜೃಂಭಣೆಯಿಂದ ಬಂಟರ ಕ್ರೀಡಾಕೂಟ ಹಮ್ಮಿಕೊಳ್ಳುತ್ತೇವೆ
ಬಂಟ್ ಲೇಜೆಂಡ್ ಕಾರ್ಯಕ್ರಮದ ಸಂಯೋಜಕರು