ನವೋದಯ ಚಾರಿಟೆಬಲ್ ಟ್ರಸ್ಟ್ ಹೆಮ್ಮರವಾಗಿ ಬೆಳೆದು ಸದೃಢವಾಗಿದೆ- ತಾರಾನಾಥ ಕಾಯರ್ಗ
ಪುತ್ತೂರು: ನವೋದಯ ಚಾರಿಟೆಬಲ್ ಟ್ರಸ್ಟ್ ನ ಸ್ಥಾಪಕಾದ್ಯಕ್ಷ ಡಾ. ಎಂ.ಎನ್ ರಾಜೇಂದ್ರ ಕುಮಾರ್ ರವರ ನೇತೃತ್ವದಲ್ಲಿ ಮೇ.10 ರಂದು ಮಂಗಳೂರಿನಲ್ಲಿ ನಡೆಯಲಿರುವ ಬ್ರಹೃತ್ ನವೋದಯ ಸದಸ್ಯರ ಸಮಾವೇಶಕ್ಕೆ ಪೂರ್ವಭಾವಿಯಗಿ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನವೋದಯ ಸದಸ್ಯರಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮ ನಡೆಯಿತು.
ನವೋದಯ ಚಾರಿಟೆಬಲ್ ಟ್ರಸ್ಟ್ ಹೆಮ್ಮರವಾಗಿ ಬೆಳೆದು ಸದೃಢವಾಗಿದೆ- ತಾರಾನಾಥ ಕಾಯರ್ಗ
ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿದ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ ರವರು ಮಾತನಾಡಿ, ಮಹಿಳೆಯರು ಸ್ವಾಭಿಮಾನಿ ಬದುಕನ್ನು ಸಾಧಿಸುವುದರ ಜೊತೆಗೆ ಆರ್ಥಿಕವಾಗಿಯು ಬಲಾಡ್ಯಗೊಂಡು ಸಮಾಜದ ಮುಖ್ಯವಾಹಿನಿಗೆ ಬರುವ ಉದ್ದೇಶದಿಂದ 24 ವರ್ಷದ ಮೊದಲು ಡಾ.ಎಂ.ಎನ್ ರಾಜೇಂದ್ರ ಕುಮಾರ್ ರವರು ಸ್ಥಾಪನೆ ಮಾಡಿದ ನವೋದಯ ಚಾರಿಟೆಬಲ್ ಟ್ರಸ್ಟ್ ಇಂದು ಹೆಮ್ಮರವಾಗಿ ಬೆಳೆದು ಸದೃಢವಾಗಿ ನಿಂತಿದೆ. ಇದಕ್ಕಾಗಿ ನಮ್ಮ ಬ್ಯಾಂಕಿನ ವತಿಯಿಂದ ಅಬಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಯಶಸ್ಸುಗೊಳಿಸಿ- ಉಮೇಶ್ ಶೆಟ್ಟಿ
ಮುಖ್ಯ ಅತಿಥಿ ನವೋದಯ ಮೇಲ್ವಿಚಾರಕ ಉಮೇಶ್ ಶೆಟ್ಟಿ ಮಾತನಾಡಿ, ನವೋದಯ ಸದಸ್ಯರೆಲ್ಲರೂ ಮೇ.10 ರಂದು ಸಮವಸ್ತ್ರಧಾರಿಗಳಾಗಿ ಸಮಾವೇಷದಲ್ಲಿ ಭಾಗವಹಿಸಿ ಯಶಸ್ಸುಗೊಳಿಸಬೇಕೆಂದು ವಿನಂತಿಸಿದರು.
ಮುಖ್ಯ ಅತಿಥಿ ಸವಣೂರು ಗ್ರಾಮ ಪಂಚಾಯತ್ ಸದಸ್ಯೆ ರಾಜೀವಿ ರೈ ರವರು ಮಾತನಾಡಿ ನಾನು ಕೂಡ ನವೋದಯ ಸದಸ್ಯಳಾಗಿದ್ದು ಮಹಿಳೆಯರ ಆರ್ಥಿಕ ಅವಶ್ಯಕತೆಯನ್ನು ಅತ್ಯಂತ ಶೀಘ್ರವಾಗಿ ಪೂರೈಸುವಲ್ಲಿ ನವೋದಯ ಸ್ವ- ಸಹಾಯ ಸಂಘ ಮತ್ತು ಸವಣೂರು ಸಿ.ಎ ಬ್ಯಾಂಕ್ ಮುಂಚೂಣಿಯಲ್ಲಿದ್ದು ಅವರನ್ನು ಅಭಿನಂದಿಸುವುದಾಗಿ ತಿಳಿಸಿದರು. ಮುಖ್ಯ ಅತಿಥಿ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಸವಣೂರು ಶಾಖೆಯ ವ್ಯವಸ್ಥಾಪಕರಾದ ಜಯಂತಿ ಉಪಸ್ಥಿತರಿದ್ದರು.
ಸವಣೂರು ಪ್ರಾಥಮಿಕ ಕೃಷಿ ಪತ್ತಿನ ನಿರ್ದೇಶಕರುಗಳಾದ ಪ್ರಕಾಶ್ ರೈ ಸಾರಕರೆ, ಶಿವಪ್ರಸಾದ್ ಕಳುವಾಜೆ, ಗಂಗಾಧರ ಪೆರಿಯಡ್ಕ, ಸೀತಾಲಕ್ಷ್ಮೀ ಪುಣ್ಚಪ್ಪಾಡಿ, ಜ್ಞಾನೇಶ್ವರಿ ಬರೆಪ್ಪಾಡಿ, ಪಂಚಾಯತ್ ಸದಸ್ಯೆ ಚಂದ್ರಾವತಿ ಉಪಸ್ಥಿತರಿದ್ದು ನವೋದಯ ಸದಸ್ಯರಿಗೆ ಸಮವಸ್ತ್ರ ವಿತರಿಸಿದರು.
ನವೋದಯ ಪ್ರೇರಕಿ ಪ್ರೇಮ ಪ್ರಾರ್ಥಿಸಿದರು, ಮುಖ್ಯಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ, ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು ಉಪಕಾರ್ಯನಿರ್ವಹಣಾಧಿಕಾರಿ ಜಲಜಾ ಎಚ್ ರೈ ಅತಿಥಿಗಳಿಗೆ ಹೂಗುಚ್ಚ ನೀಡಿದರು. ಸಂಘದ ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು ವಂದಿಸಿದರು. ಸಂಘದ ಸಿಬಂದಿಗಳು ಸಹಕರಿಸಿದರು.
ನವೋದಯ ಸ್ವ-ಸಹಾಯ ಸಂಘ ಸಮಾಜಕ್ಕೆ ಲಾಭ
ನವೋದಯ ಸ್ವ-ಸಹಾಯ ಸಂಘಗಳಿಂದ ಸಮಾಜದಲ್ಲಿ ಹೊಸ ಕ್ರಾಂತಿ ಆಗಿದೆ. ಮಹಿಳೆಯರು ಸ್ವಾಭಿಮಾನಿ ಬದುಕು ಕಟ್ಟುವ ಜೊತೆಗೆ, ಮಕ್ಕಳ ವಿದ್ಯಾಭ್ಯಾಸಕ್ಕೂ ಕೂಡ ಪ್ರಯೋಜನವಾಗಿದೆ. ಒಟ್ಟು ಸಮಾಜಕ್ಕೆ ನವೋದಯ ಸಂಘಗಳಿಂದ ಲಾಭವಾಗಿದೆ
ತಾರಾನಾಥ ಕಾಯರ್ಗ
ಅಧ್ಯಕ್ಷರು- ಸವಣೂರು ಪ್ರಾ.ಕೃ.ಪತ್ತಿನ ಸಹಕಾರ ಸಂಘ ಸವಣೂರು