ಪುತ್ತೂರು: ವಿಶ್ವಕರ್ಮ ಸಮಾಜದ ಪುತ್ತೂರು ನಗರ ಕೂಡುವಳಿಕೆ ಮೊಕ್ತೇಸರ ಪಾಕತಜ್ಞ ರಾಘವ ಆಚಾರ್ಯ (65ವ) ರವರು ಏ.29 ರಂದು ಸಂಜೆ ನಿಧನರಾದರು.
ಪಂಜ ಮೂಲದ ರಾಘವ ಆಚಾರ್ಯ ಅವರು ಪುತ್ತೂರು ಬನ್ನೂರಿನಲ್ಲಿ ವಾಸ್ತವ್ಯ ಹೊಂದಿದ್ದು ಏ.29 ರಂದು ಅವರು ಸಂಜೆ ಮನೆಯಲ್ಲಿ ಮಲಗಿದ್ದ ಸ್ಥಿತಿಯಲ್ಲಿ ಅಸ್ವಸ್ಥರಾಗಿದ್ದು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಗಲೇ ಅವರು ಮೃತಪಟ್ಟಿದ್ದರು. ಮೃತರು ಪುತ್ರ ಯಶವಂತ, ಪುತ್ರಿಯರಾದ ಸವಿತಾ, ಸುಶ್ಮಿತಾ, ಅಳಿಯಂದಿರು, ಸೊಸೆಯನ್ನು ಅಗಲಿದ್ದಾರೆ.