ಪುತ್ತೂರು: ದೇಶದ ಅತಿದೊಡ್ಡ ಖಾಸಗಿ ಹಣಕಾಸು ಸಂಸ್ಥೆ ಮುತ್ತೂಟ್ ಪಿನ್ ಕಾರ್ಪ್ 2024-25ನೇ ಸಾಲಿಗೆ ಅಡಮಾನ ಸಾಲ ವಿಭಾಗದಲ್ಲಿ ಅತ್ಯಧಿಕ ವ್ಯವಹಾರ ನಡೆಸಿರುವ ಇಲ್ಲಿನ ಏಳ್ಮುಡಿ ಡೇನಿಯಲ್ ಆರ್ಕೇಡ್ ನಲ್ಲಿ ವ್ಯವಹರಿಸುತ್ತಿರುವ ನಮೃತಾ ಫೈನಾನ್ಸಿಯಲ್ ಕನ್ಸಲ್ಟೆಂಟ್ ಸಂಸ್ಥೆಗೆ ಮುತ್ತೂಟ್ ಟಾಪ್ ಕನೆಕ್ಟರ್ ಪ್ರಶಂಸ ಪತ್ರ ನೀಡಿ ಗೌರವಿಸಿದೆ.
ಪ್ರಶಂಸ ಪತ್ರವನ್ನು ಮಂಗಳೂರಿನಲ್ಲಿರುವ ಮುತ್ತೂಟ್ ಫಿನ್ ಕಾರ್ಪ್ ಶಾಖೆಯಲ್ಲಿ ಶಾಖಾ ವ್ಯವಸ್ಥಾಪಕ ಅಶ್ವಿನ್ ರವರು ನಮೃತಾ ಫೈನಾನ್ಸಿಯಲ್ ಮಾಲಕ ನಾಗೇಶ್ ನಾಯಕ್ ಇಂದಾಜೆ ಇವರಿಗೆ ಪ್ರಧಾನ ಮಾಡಿದರು. ಗೃಹಸಾಲ, ಅಡಮಾನ ಸಾಲ, ಸರಕಾರಿ ಮತ್ತು ಖಾಸಗಿ ಫೈನಾನ್ಸ್ ಮೂಲಕ ಗ್ರಾಹಕ ವರ್ಗಕ್ಕೆ ಸುಲಭ, ಸರಳ ಮತ್ತು ತ್ವರಿತ ರೀತಿಯಲ್ಲಿ ಒದಗಿಸುವ ಮೂಲಕ ಗ್ರಾಹಕ ವರ್ಗಕ್ಕೆ ಉತ್ತಮ ಸೇವೆಯನ್ನು ನೀಡುತ್ತಿರುವ ನಮೃತಾ ಕಳೆದ ಏಳು ವರ್ಷಗಳಿಂದ ಗ್ರಾಹಕ ವರ್ಗದ ವಿಶ್ವಾಸಾರ್ಹ ಸಂಸ್ಥೆಯಾಗಿದೆ.
ಈ ಹಿಂದೆಯೂ ಮೂರು ಖಾಸಗಿ ಹಣಕಾಸು ಸಂಸ್ಥೆಗಳಿಂದ ಅತ್ಯುತ್ತಮ ಏಜೆಂಟ್ ಪ್ರಶಸ್ತಿಯನ್ನು ಕೂಡ ನಮೃತಾ ಸ್ವೀಕರಿಸಿತ್ತು.