ಹುಬ್ಬಳ್ಳಿ: ಪ್ರವೀಣ್ ಕ್ಯಾಪಿಟಲ್ ಶಾಖೆ ಉದ್ಘಾಟನೆ

0

ಪುತ್ತೂರು/ಹುಬ್ಬಳ್ಳಿ: ಪ್ರವೀಣ್ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್ ಇದರ 17ನೇ ಶಾಖೆಯು ಹುಬ್ಬಳ್ಳಿಯ ವಿದ್ಯಾನಗರದ ಮಾರ್ವೇಲ್ ಆರ್ಟಿಜದಲ್ಲಮೇ.3ರಂದು ಉದ್ಘಾಟನೆಗೊಂಡಿತು.

ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮೋಘ ಜೆ ರೈ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ ಈ ವರ್ಷ ಕರ್ನಾಟಕದಾದ್ಯಂತ 10 ಶಾಖೆಗಳು ತೆರೆಯಲಿದ್ದು, ಈಗಾಗಲೇ ಕುಂದಾಪುರ, ಬೆಳಗಾವಿ ಹಾಗೂ ಬಾಗಲಕೋಟೆಯಲ್ಲಿ ಶಾಖೆಗಳು ಪ್ರಾರಂಭಗೊಂಡಿದ್ದು, ಈಗ ನಾಲ್ಕನೇಯ ಶಾಖೆಯೂ ಇಲ್ಲಿ ಉದ್ಘಾಟನೆಗೊಂಡಿದೆ. ಮುಂದಿನ ದಿನಗಳಲ್ಲಿ ಅರಕಲಗೂಡು, ಗೋಣಿಕೊಪ್ಪ ಬಳಿಕ ಬೆಂಗಳೂರಿನಲ್ಲಿಯೂ ಕಛೇರಿ ಆರಂಭಗೊಳ್ಳಲಿದೆ. ಗ್ರಾಹಕರಿಗೆ ಅತೀ ಶೀಘ್ರದಲ್ಲಿ ಹೊಸ ವಾಹನ ಖರೀದಿ ಸಾಲ, ಸೆಕೆಂಡ್ ಹ್ಯಾಂಡ್ ವಾಹನ ಸಾಲ, ನೀಡುವುದರ ಜೊತೆಗೆ ಭೂ ಅಡಮಾನ ಸಾಲ, ಚಿನ್ನ ಅಡಮಾನ ಸಾಲ, ವ್ಯವಹಾರ ಸಾಲವನ್ನು ನೀಡುವ ಯೋಜನೆಯನ್ನು ಮುಂದಿನ ದಿನಗಳಲ್ಲಿ ಕೈಗೊಳ್ಳಲಿದೆ ಎಂದರು.

ಖ್ಯಾತ ಪಾನಿಯ ಬ್ರಾಂಡ್ ಬಿಂದು ಮಾಲಕತ್ವ ಹೊಂದಿರುವ ಎಸ್.ಜಿ. ಗ್ರೂಪ್ ನ ಅಂಗಸಂಸ್ಥೆಯಾಗಿರುವ ಪ್ರವೀಣ್ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು 1994 ರಲ್ಲಿ ಸ್ಥಾಪನೆಯಾಗಿದ್ದು ಮಂಗಳೂರಿನಲ್ಲಿ ನೋಂದಾಯಿತ ಕಛೇರಿಯನ್ನು ಹೊಂದಿದೆ. ಮ್ಯಾನೇಜಿಂಗ್ ಡೈರೆಕ್ಟರ್ ಸತ್ಯಶಂಕರ್ ಕೆ ಹಾಗೂ ಎಕ್ಸಿಕ್ಯೂಟಿವ್ ನಿರ್ದೇಶಕರಾದ ರಂಜಿತಾ ಶಂಕರ್ ಇವರ ಆಶಯದಂತೆ ಗ್ರಾಹಕರಿಗೆ ಉತ್ತಮ ಪಾರದರ್ಶಕ ಸೇವೆಯನ್ನು ನೀಡುತ್ತಾ ಅನೇಕ ಕುಟುಂಬಗಳು ಸ್ವಾವಲಂಬಿಯನ್ನಾಗಿಸಿದೆ ಎಂದು ತಿಳಿಸಿದರು.

ಈ ಸಂದರ್ಬದಲ್ಲಿ ಸಂಸ್ಥೆಯ ಉಪಮಹಾನಿರ್ದೇಶಕ ಶ್ರೀವಸ್ತರಾಜ್ ಎಮ್ ಜಿ, ಸೀನಿಯರ್ ರಿಕವರಿ ಮ್ಯಾನೇಜರ್ ಕೇಶವ್ ಹೆಚ್, ಸಂಜಯ್ ಇಂಚಲ್, ಗೌಸ್ ರಾಯಚೂರು, ನಾಗೇಂದ್ರ ಭಟ್ ಮಲ್ಲಿಕಾರ್ಜುನ್ ಮೈಗುರ್, ಮಂಜುನಾಥ್ ಚಪ್ಪರ್ಮನಿ, ಕಲ್ಮೇಶ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here