ನಾಳೆ(ಮೇ.9) ಬನ್ನೂರು ಕರ್ಮಲ ಶ್ರೀ ಮಹಾಮ್ಮಾಯಿ ದೇವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ಮೇ 10ರಿಂದ ಕಾಲಾವಧಿ ಉತ್ಸವ, ನೇಮೋತ್ಸವ

0

ಪುತ್ತೂರು: ಬನ್ನೂರು ಕರ್ಮಲದಲ್ಲಿರುವ ಶ್ರೀ ಮಹಾಮ್ಮಾಯಿ ದೇವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ವೇ ಮೂ ಹರಿಪ್ರಸಾದ್ ಭಟ್ ಬನಾರಿ ಅವರ ನೇತೃತ್ವದಲ್ಲಿ ಮೇ.9ರಂದು ನಡೆಯಲಿದೆ. ಮೇ.10ರಂದು ಕಾಲಾವಧಿ ಉತ್ಸವ, ಮೇ.12ಕ್ಕೆ ಭಂಡಾರದ ಚಾವಡಿಯಲ್ಲಿ ನೇಮೋತ್ಸವ ನಡೆಯಲಿದೆ.


ಮೇ.8ರಂದು ದೇವಸ್ಥಾನದ ಭಂಡಾರ ಚಾವಡಿಯಲ್ಲಿ ಬ್ರಹ್ಮಕಲಶಾಭಿಷೇಕ ನಡೆದಿದ್ದು, ಮೇ.9ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ, ಕಲಶ ಪೂಜೆ, ಶ್ರೀ ಸತ್ಯನಾರಾಯಣ ಪೂಜೆ ನಡೆದು ಬ್ರಹ್ಮಕಲಶಾಭಿಷೇಕ ತಂಬಿಲ ಸೇವೆ, ಮಹಾಪೂಜೆ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಸಭಾ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ. ಎಂ.ಕೆ.ಪ್ರಸಾದ್ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಸ್ಥಳಿಯರಿಂದ ಮತ್ತು ಸಂಗಮ್ ಬ್ರದರ‍್ಸ್ ಮತ್ತು ಮುರಳಿ ಬ್ರದರ‍್ಸ್ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಬಳಿಕ ಕಲ್ಲಡ್ಕ ವಿಠಲ ನಾಯಕ್ ಅವರಿಂದ ಗೀತಾ ಸಾಹಿತ್ಯ ಕಾರ್ಯಕ್ರಮ ನಡೆಯಲಿದೆ.

ಮೇ 10ರಂದು ಬೆಳಿಗ್ಗೆ ದೇವಸ್ಥಾನದಲ್ಲಿ ಭಜನಾ ಕಾರ್ಯಕ್ರಮ ಮತ್ತು ವೈದಿಕ ಕಾರ್ಯಕ್ರಮ ನಡೆದು ಸಂಜೆ ಭಂಡಾರದ ಚಾವಡಿಯಲ್ಲಿ ಭಜನಾ ಕಾರ್ಯಕ್ರಮ ಮತ್ತು ಶ್ರೀ ವೆಂಕಟರಮಣ ದೇವರ ಹರಿಸೇವೆ ನಡೆಯಲಿದೆ. ರಾತ್ರಿ ಶ್ರೀ ಮಹಾಮ್ಮಾಯಿ ದೇವರ ಭಂಡಾರ ಹೊರಟು ದೇವಸ್ಥಾನ ತಲುಪಿ ಶ್ರೀ ಮಹಾಮ್ಮಾಯಿ ದೇವರ ಕಾಲಾವಧಿ ಉತ್ಸವ(ಮಾರಿಪೂಜೆ) ನಡೆಯಲಿದೆ. ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಮೇ 12ಕ್ಕೆ ಭಂಡಾರದ ಚಾವಡಿಯಲ್ಲಿ ಕಲ್ಲುರ್ಟಿ, ಅಣ್ಣಪ್ಪ ಪಂಜುರ್ಲಿ, ಶ್ರೀ ಚಾಮುಂಡಿ, ಗುಳಿಗ ದೈವಗಳಿಗೆ ನೇಮೋತ್ಸವ ನಡೆಯಲಿದೆ.

LEAVE A REPLY

Please enter your comment!
Please enter your name here