ನಕಲಿ ಚಿನ್ನಾಭರಣ ಅಡವಿಟ್ಟು ಸಹಕಾರಿ ಸಂಘಗಳಿಗೆ ವಂಚನೆ ಪ್ರಕರಣ-ಆರೋಪಿಗೆ ಜಾಮೀನು

0

ಪುತ್ತೂರು: ಪುತ್ತೂರಿನ ಮೂರು ಸಹಕಾರಿ ಸಂಘದಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟು ಸಾಲ ಪಡೆದು ವಂಚನೆ ಮಾಡಿರುವ ಪ್ರಕರಣದ ಆರೋಪಿಗೆ ಪುತ್ತೂರು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಬೆಳಂದೂರು ನಿವಾಸಿ ಅಬ್ದುಲ್ ರಮೀಝ್ ಎಂಬಾತ ಪುತ್ತೂರಿನ ಒಡಿಯೂರು ಶ್ರೀ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ನಕಲಿ ಚಿನ್ನಾಭರಣ ಇರಿಸಿ ರೂ.9.25,000 ಸಾಲ ಪಡೆದು ವಂಚನೆ, ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ನಕಲಿ ಚಿನ್ನಾಭರಣ ಇರಿಸಿ ರೂ.2.91 ಲಕ್ಷ ಸಾಲ ಪಡೆದು ವಂಚನೆ ಮಾಡಿರುವುದು ಅಲ್ಲದ ಮೂರ್ತೆದಾರರ ಸಹಕಾರಿ ಸಂಘದಲ್ಲಿ ಲತೀಫ್ ಮತ್ತು ಅಬ್ದುಲ್ ರಮೀಝ್ ಅವರು ನಕಲಿ ಚಿನ್ನಾಭರಣ ಅಡವಿರಿಸಿ ರೂ.1.45 ಲಕ್ಷ ಸಾಲ ಪಡೆದು ವಂಚನೆ ಮಾಡಿದ್ದ ಕುರಿತು ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ನೀಡಿದ್ದ ದೂರಿನಂತೆ ಆರೋಪಿಗಳ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿತ್ತು. ಆರೋಪಿ ಅಬ್ದುಲ್ ರಮೀಝ್ ಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಆರೋಪಿ ಪರ ವಕೀಲರಾದ ಅರುಣ್ ಬಂಗೇರ, ಮಾಧವ ಪೂಜಾರಿ, ರಾಕೇಶ್ ಬಲ್ನಾಡು ವಾದಿಸಿದ್ದರು.

LEAVE A REPLY

Please enter your comment!
Please enter your name here