ನೇರಳಕಟ್ಟೆ: ಆಂಬ್ಯುಲೆನ್ಸ್ ಲೋಕಾರ್ಪಣೆ

0

ಪುತ್ತೂರು: ಸೆಕೆಂಡ್ ಹ್ಯಾಂಡ್ ವಾಹನಗಳ ಮಾರಾಟದಲ್ಲಿ ಪ್ರಸಿದ್ಧಿ ಪಡೆದಿರುವ ನೇರಳಕಟ್ಟೆಯಲ್ಲಿ ಕಾರ್ಯಾಚರಿಸುತ್ತಿರುವ ಭಾರತ್ ವೆಹಿಕಲ್ ಬಜಾರ್ ಸಂಸ್ಥೆ ವತಿಯಿಂದ ಸಾರ್ವಜನಿಕ ಪ್ರಯೋಜನಕ್ಕಾಗಿ ನೂತನ ಆಂಬ್ಯುಲೆನ್ಸ್ ಕೊಡುಗೆಯಾಗಿ ನೀಡಲಾಗಿದ್ದು ಅದರ ಲೋಕಾರ್ಪಣಾ ಕಾರ್ಯಕ್ರಮ ಮೇ.11ರಂದು ನೇರಳಕಟ್ಟೆಯಲ್ಲಿ ನಡೆಯಿತು.

ಸಯ್ಯದ್ ಹಂಝ ತಂಙಳ್ ಪಾಟ್ರಕೋಡಿ ಅವರು ಆಂಬ್ಯುಲೆನ್ಸ್‌ನ್ನು ಲೋಕಾರ್ಪಣೆಗೊಳಿಸಿ ಪ್ರಾರ್ಥನೆ ನೆರವೇರಿಸಿದರು.
ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾತನಾಡಿ, ತುರ್ತು ಆರೋಗ್ಯ ಸಮಸ್ಯೆ ಸಂದರ್ಭದಲ್ಲಿ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲು ಭಾರತ್ ವೆಹಿಕಲ್ ಬಜಾರ್‌ನ ಮಾಲಕ ಅಶ್ರಫ್ ಅವರು ಆಂಬ್ಯುಲೆನ್ಸ್‌ನ್ನು ಸಮಾಜಕ್ಕೆ ಸಮರ್ಪಿಸಿರುವುದು ಮಾದರಿ ಕಾರ್ಯವಾಗಿದ್ದು ಇದು ಪುಣ್ಯದ ಕಾರ್ಯವಾಗಿದೆ ಎಂದು ಹೇಳಿದರು.

ಪತ್ರಕರ್ತ ಯೂಸುಫ್ ರೆಂಜಲಾಡಿ ಮಾತನಾಡಿ, ತನ್ನ ಉದ್ಯಮದ ಜೊತೆ ಸಮಾಜ ಸೇವೆಯನ್ನು ಹಿಂದಿನಿಂದಲೂ ಮಾಡಿಕೊಂಡು ಬಂದಿರುವ ಅಶ್ರಫ್ ತಿಂಗಳಾಡಿಯವರು ಆಂಬ್ಯುಲೆನ್ಸ್‌ವೊಂದನ್ನು ಸಮಾಜಕ್ಕೆ ಸಮರ್ಪಿಸಿ ಯುವ ಜನತೆಗೆ ಸ್ಪೂರ್ತಿಯಾಗಿದ್ದಾರೆ, ಇಂತಹ ಸಮಾಜಮುಖಿ ಕಾರ್ಯಗಳನ್ನು ನಡೆಸುವವರನ್ನು ಜನರು ಪ್ರೋತ್ಸಾಹಿಸಬೇಕಾದ ಅವಶ್ಯಕತೆಯಿದೆ ಎಂದು ಹೇಳಿದರು. ಪಂತಡ್ಕ ಮದ್ರಸ ಅಧ್ಯಾಪಕ ಜಾಫರ್ ಸಾದಿಕ್ ಅರ್ಶದಿ ಶುಭ ಹಾರೈಸಿದರು.


ಅಧ್ಯಕ್ಷತೆ ವಹಿಸಿದ್ದ ಕೊಡಾಜೆ ಬದ್ರಿಯಾ ಜುಮಾ ಮಸೀದಿ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಮಾತನಾಡಿ, ಮನುಷ್ಯನ ಜೀವವುಳಿಸುವ ಆಂಬ್ಯುಲೆನ್ಸ್ ಸೇವೆಯನ್ನು ನೀಡಿರುವ ಭಾರತ್ ವೆಹಿಕಲ್ ಬಜಾರ್‌ನ ಮಾಲಕ ಅಶ್ರಫ್ ಅವರು ಸಮಾಜಕ್ಕೆ ಮಾದರಿಯೆನಿಸಿದ್ದಾರೆ ಎಂದು ಶ್ಲಾಘಿಸಿದರು.

ಕೊಡಾಜೆ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಅಬ್ಬಾಸ್ ನೇರಳಕಟ್ಟೆ, ಹಾರಿಸ್ ಮುಸ್ಲಿಯಾರ್, ಕೊಡಾಜೆ ಐಕ್ಯ ವೇದಿಕೆಯ ಅಧ್ಯಕ್ಷ ಫಾರೂಕ್ ಗೋಳಿಕಟ್ಟೆ, ಉಪಾಧ್ಯಕ್ಷ ರಫೀಕ್ ಯಸ್ ಯಸ್, ಕಾಂಗ್ರೆಸ್ ಮುಖಂಡ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ, ಪರ್ಲೊಟ್ಟು ಜುಮಾ ಮಸೀದಿಯ ಅಧ್ಯಕ್ಷ ರಶೀದ್ ಪರ್ಲೊಟ್ಟು, ರಝಾಕ್ ಅನಂತಾಡಿ, ಮುನೀರ್ ಕೊಡಾಜೆ, ಇಬ್ರಾಹಿಂ ಎಸ್.ಎಂ.ಎಸ್, ಕೊಡಾಜೆ ಐಕ್ಯ ವೇದಿಕೆಯ ಕಾರ್ಯದರ್ಶಿ ಶರೀಫ್ ಅನಂತಾಡಿ, ಅತ್ತಾವುಲ್ಲ ನೇರಳಕಟ್ಟೆ, ನೌಫಲ್ ಮಿತ್ತೂರು, ರಫೀಕ್ ಮದನಿ ಗಡಿಯಾರ, ರಫೀಕ್ ಪಂತ್ತಡ್ಕ, ಹಮೀದ್ ಪರ್ಲೋಟ್ಟು, ಅಬೂಬಕ್ಕರ್ ಅರಫಾನ್, ಶರೀಫ್ ಬಡಜ, ಆಸಿಫ್ ಬೋಳಂತೂರು, ರಿಯಾಝ್ ಬಡಜ, ಸಲೀಂ ಮಿತ್ತೂರು, ರಿಯಾಝ್ ಪರ್ಲೊಟ್ಟು ಮತ್ತಿತರರು ಉಪಸ್ಥಿತರಿದ್ದರು. ಪತ್ರಕರ್ತ ಲತೀಫ್ ನೇರಳಕಟ್ಟೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಭಾರತ್ ವೆಹಿಕಲ್ ಬಜಾರ್‌ನ ಮಾಲಕ ಅಶ್ರಫ್ ತಿಂಗಳಾಡಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಸಮಾಜಕ್ಕೆ ನಮ್ಮಿಂದಾಗುವ ಸಣ್ಣ ಕೊಡುಗೆಯನ್ನು ನೀಡುವ ಉದ್ದೇಶಕ್ಕೆ ಆಂಬ್ಯಲೆನ್ಸ್ ಲೋಕಾರ್ಪಣೆ ಮಾಡಿದ್ದು ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಿ ನೆರವಾಗುವುದು ನಮ್ಮ ಉದ್ದೇಶ. ಆಂಬ್ಯಲೆನ್ಸ್ ಸೇವೆಗೆ ನಿರ್ದಿಷ್ಟ ಶುಲ್ಕ ನಿಗದಿಪಡಿಸಲಾಗಿದ್ದು ಕಡು ಬಡವರಿಗೆ ಉಚಿತ ಸೇವೆ ನೀಡಲಿದ್ದೇವೆ.
-ಅಶ್ರಫ್ ತಿಂಗಳಾಡಿ, ಮಾಲಕರು ಭಾರತ್ ವೆಹಿಕಲ್ ಬಜಾರ್

LEAVE A REPLY

Please enter your comment!
Please enter your name here