ಪುತ್ತೂರು: ಸಂಪ್ಯದಲ್ಲಿರುವ ವಿದತ್ ಶಿಕ್ಷಣ ಸಂಸ್ಥೆಯಲ್ಲಿ KCET, NEET, JEE ತರಬೇತಿ ಕೋರ್ಸ್ ಗಳ ಉದ್ಘಾಟನಾ ಸಮಾರಂಭ ಮೇ.11ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದತ್ ಸಂಸ್ಥಾಪಕ ಶ್ರೀ ವತ್ಸ್. ಬಿ ಎಸ್ ವಹಿಸಿದ್ದರು. ಉದ್ಘಾಟಕರಾಗಿ ಪ್ರೊ.ಫೀಸಿಸಿಸ್ಟ್ ಡಾ|ಎ.ಪಿ ರಾಧಾಕೃಷ್ಣ ಹಾಗೂ ಮುಖ್ಯ ಅತಿಥಿಯಾಗಿ ಸಂಪ್ಯ ಪೊಲೀಸ್ ಠಾಣೆಯ ಎಸ್. ಐ ಜಂಬೂರಾಜ್ ಮಹಾಜನ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ|ಎ ಪಿ ರಾಧಾಕೃಷ್ಣ ಇಂದಿನ ಪರಿಶ್ರಮವೇ ನಾಳಿನ ಯಶಸ್ಸಿಗೆ ಬುನಾದಿ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.ಎಸ್.ಐ ಜಂಬೂರಾಜ್ ಮಹಾಜನ್ ಮಾತನಾಡಿ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಶಿಕ್ಷಣದ ಮಹತ್ವದ ಬಗ್ಗೆ ತಿಳಿ ಹೇಳಿದರು. ವಿದತ್ ಸಹಸಂಸ್ಥಾಪಕಿ ಕುಮಾರಿ ಶುಭಲಕ್ಷ್ಮಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿದತ್ ಸ್ನೇಹಿತರ ಕನಸಾಗಿದ್ದು, ಇದರ ಒಂದು ವರ್ಷದ ವಿಶ್ವಾಸಾರ್ಹ ಬೆಳವಣಿಗೆ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಶ್ರೀ ವತ್ಸ್ ಬಿ .ಎಸ್ KCET, NEET, JEE ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯ ವಿಭಿನತೆಯನ್ನು ಸ್ಪಷ್ಟಪಡಿಸಿದರು.
ಸಂಸ್ಥೆಯ ವಿದ್ಯಾರ್ಥಿಗಳಾದ ಅಕ್ಷಜ್ ಸ್ವಾಗತಿಸಿ ವಿಖ್ಯಾತ್ ವಂದಿಸಿದರು. ಉಪನ್ಯಾಸಕಿ ಸ್ಪೂರ್ತಿ ಸಾಲಿಯನ್ ಕಾರ್ಯಕ್ರಮ ನಿರೂಪಿಸಿದರು.