ನೆಲ್ಯಾಡಿ: ಬೆಥನಿ ಕೈಗಾರಿಕಾ ತರಬೇತಿ ಸಂಸ್ಥೆ ನೆಲ್ಯಾಡಿಯಲ್ಲಿ ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಾದ Indo-Mim ವತಿಯಿಂದ ಮೇ.12ರಂದು ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ಸ್, ಫಿಟ್ಟರ್ ಹಾಗೂ ವೆಲ್ಡರ್ ವಿಭಾಗದ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸಂದರ್ಶನ ನಡೆಯಿತು.
ಕಾರ್ಯಕ್ರಮವನ್ನು Indo-Mim ಪ್ರತಿನಿಧಿಗಳಾದ ದಯಾನಂದ ಹಾಗೂ ವಿಶಾಲ್ ಇವರು ನಡೆಸಿದರು. ಈ ಸಂದರ್ಶನದಲ್ಲಿ ಬೆಥನಿ ಕೈಗಾರಿಕಾ ತರಬೇತಿ ಸಂಸ್ಥೆಯ ಒಟ್ಟು 46 ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ ಎಂದು ಸಂಸ್ಥೆಯ ಪ್ರಾಂಶುಪಾಲರು ತಿಳಿಸಿದರು.