ಪುತ್ತೂರು:ಬಲ್ನಾಡು ಗ್ರಾಮ ಪಂಚಾಯತ್ ಅರಿವು ಕೇಂದ್ರದಿಂದ ಆಯೊಜಿಸಲಾದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಮೇ.17ರಂದು ಬಲ್ನಾಡು ಗ್ರಾಮ ಪಂಚಾಯತ್ ಸಭಾಭವನ ನಡೆಯಿತು.
ತನುಕೃಪಾ, ಯಶಸ್, ರಿಷಿತಾ, ರಿತ್ವಿಕ್ ಶಿಬಿರದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು ನಂತರ ಸುಗಮಗಾರರು ಶಿಬಿರದ ಕುರಿತು ಅಭಿಪ್ರಾಯ ವ್ಯಕ್ತಿಪಡಿಸಿದರು. ಸುಗಮಗಾರರಿಗೆ ಪ್ರಶಸಂಣ ಪತ್ರ, ಮಕ್ಕಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಹಾಗೂ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿ ಬಹುಮಾನ ನೀಡಲಾಯಿತು.

ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೇವಪ್ಪ ಪಿ. ಆರ್, ಪಂಚಾಯತ್ ಕಾರ್ಯದರ್ಶಿ ಲಕ್ಷ್ಮಿ, ಸುಗಮಗಾರರಾದ ಕೃಷ್ಣಪ್ಪ, ಸುಮತಿ , ಶೈಲ, ಭಾರತಿ ಹಾಗೂ ಮಕ್ಕಳು, ಮಕ್ಕಳ ಪೋಷಕರು ಉಪಸ್ಥಿತರದ್ದರು.
ಶಿಬಿರಾರ್ಥಿಗಳಾದ ಹಿತಶ್ರೀ, ಹರ್ಷಿತ, ಪ್ರಣೀತ ಪ್ರಾರ್ಥಿಸಿದರು.ಶಿಬಿರಾರ್ಥಿ ಅರ್ಸೆಲ್ ಸ್ವಾಗತಿಸಿದರು. ಪಂಚಾಯತ್ ಸಿಬ್ಬಂದಿ ಹಾಗೂ ಗ್ರಂಥಾಲಯ ಮೇಲ್ವಿಚಾರಕಿ ಕಾರ್ಯಕ್ರಮ ನಿರೂಪಿಸಿದರು.