ನೆಲ್ಯಾಡಿ; ಪತ್ನಿ ಮನೆ ಬಿಟ್ಟುಹೋಗಿರುವ ಚಿಂತೆಯಲ್ಲಿ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಐತ್ತೂರು ಗ್ರಾಮದ ಸಿಆರ್ಸಿ ಕಾಲೋನಿಯಲ್ಲಿ ಮೇ.20ರಂದು ಬೆಳಿಗ್ಗೆ ನಡೆದಿದೆ.
ಸಿಆರ್ಸಿ ಕಾಲೋನಿ ನಿವಾಸಿ ಸುಧೀಂದ್ರ ಗಾಂಧಿ ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ. ಸುಧೀಂದ್ರ ಗಾಂಧಿ ಅವರು ಕುಡಿಯುವ ಚಟವುಳ್ಳವರಾಗಿದ್ದು ಪತ್ನಿ ತುಳಸಿ ಮನೆಬಿಟ್ಟು ಹೋಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮನನೊಂದು 4 ದಿನಗಳಿಂದ ತಮ್ಮ ಮನೋಹರ ಅವರ ಮನೆಯಲ್ಲಿ ವಾಸವಿದ್ದರು.
ಮೇ .20ರಂದು ಬೆಳಿಗ್ಗೆ 8.30ಕ್ಕೆ ಮನೆಯಲ್ಲಿ ಒಬ್ಬರೇ ಇರುವ ಸಮಯ ಹೆಂಡತಿ ವಾಪಾಸು ಬರುವುದಿಲ್ಲ, ಗಂಡ ಬೇಡಾ ಅಂತ ತಿಳಿಸಿರುವ ವಿಚಾರ ತಿಳಿದು ಮನನೊಂದು ಕುಡಿದ ಅಮಲಿನಲ್ಲಿ ಮನೆಯ ಕೋಣೆಯಲ್ಲಿ ಕುತ್ತಿಗೆಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಮೃತರ ಪುತ್ರ ಕೌಶಿಕ್ ನೀಡಿರುವ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.