ನೆಲ್ಯಾಡಿ: ಶ್ರೀ ದುರ್ಗಾಪರಮೇಶ್ವರಿ ಅಡಿಕೆ ಬೆಳೆಗಾರರು ರೈತ ಶಕ್ತಿ ಗುಂಪು ಪಟ್ಟೆಗುಡ್ಡೆ ಇಚ್ಲಂಪಾಡಿ ಹಾಗೂ ಶ್ರೀ ದೇವಿ ಸ್ವಸಹಾಯ ಸಂಘ ಪಟ್ಟೆಗುಡ್ಡೆ-ಇಚ್ಲಂಪಾಡಿ ಇವರ ವತಿಯಿಂದ ಉಪ್ಪಿನಂಗಡಿ ರೈತ ಸಂಪರ್ಕ ಕೇಂದ್ರದ ನಿವೃತ್ತ ಪ್ರಭಾರ ಕೃಷಿ ಅಧಿಕಾರಿ ತಿರುಪತಿ ಎನ್.ಭರಮಣ್ಣವರ ಅವರಿಗೆ ಸನ್ಮಾನ ಕಾರ್ಯಕ್ರಮ ಇಚ್ಲಂಪಾಡಿ ಪಟ್ಟೆಗುಡ್ಡೆಯಲ್ಲಿ ನಡೆಯಿತು.
ಶ್ರೀ ದುರ್ಗಾಪರಮೇಶ್ವರಿ ಅಡಿಕೆ ಬೆಳೆಗಾರರು ರೈತ ಶಕ್ತಿ ಗುಂಪು ಪಟ್ಟೆಗುಡ್ಡೆ ಇಚ್ಲಂಪಾಡಿ ಸಂಘದ ಅಧ್ಯಕ್ಷ ಜಾನಪ್ಪ ಪೂಜಾರಿಯವರು ಅಧ್ಯಕ್ಷತೆ ವಹಿಸಿದ್ದರು. ಇಚ್ಲಂಪಾಡಿ ಪಟ್ಟೆಗುಡ್ಡೆ ಶ್ರೀದೇವಿ ಸ್ವಸಹಾಯ ಸಂಘದ ಅಧ್ಯಕ್ಷ ಯಜ್ಞಪಾಲ ಶುಭಹಾರೈಸಿದರು. ಸಮಾರಂಭದಲ್ಲಿ ನಿವೃತ್ತ ಪ್ರಭಾರ ಕೃಷಿ ಅಧಿಕಾರಿ ತಿರುಪತಿ ಎನ್.ಭರಮಣ್ಣವರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಕಾರ್ಯದರ್ಶಿ ರಾಜಶೇಖರ ಅವರು ಪ್ರಾರ್ಥಿಸಿ, ನಿರೂಪಿಸಿದರು. ಶಿವಪ್ಪ ಗೌಡ ಸ್ವಾಗತಿಸಿದರು. ಆಶಾಲತಾ ವಂದಿಸಿದರು. ಸಂಘದ ಸದಸ್ಯರು ಉಪಸ್ಥಿತರಿದ್ದರು.