ಪುತ್ತೂರು : ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಡಿಸೆಂಬರ್ 14ರಂದು ನಡೆದ ದಕ್ಷಿಣ ಕನ್ನಡ,ಉಡುಪಿ ಮತ್ತು ಕೊಡಗು ಜಿಲ್ಲೆಗಳನ್ನು ಒಳಗೊಂಡ ಅಂತರ್ ಜಿಲ್ಲಾ ಮಾಸ್ಟರ್ಸ್ ಕ್ರೀಡಾಕೂಟದಲ್ಲಿ ಪುತ್ತೂರು ತಾಲೂಕು ನರಿಮೊಗರು ಗ್ರಾಮದ ಶೆಟ್ಟಿಮೆಜಲು ದಿನೇಶ್ ಆಚಾರ್ಯ ಅವರು 40ರ ವಯೋಮಾನದ 800 ಮೀ ಓಟದಲ್ಲಿ ಬೆಳ್ಳಿಯ ಪದಕ ಮತ್ತು 3 ಕಿ.ಮೀ ವೇಗದ ನಡಿಗೆಯಲ್ಲಿ ಚಿನ್ನದ ಪದಕ ಮತ್ತು 1500 ಮೀ ಓಟದಲ್ಲಿ ಕಂಚಿನ ಪದಕವನ್ನು ಪಡೆದಿರುತ್ತಾರೆ.
ಇವರು ಪುತ್ತೂರಿನ ಪ್ರಗತಿ ಆಸ್ಪತ್ರೆಯ ಅಕೌಂಟಿಂಗ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮೇಜರ್ ವೆಂಕಟ್ ರಾಮಯ್ಯ, ಅಥ್ಲೆಟಿಕ್ ಕ್ಲಬ್ ಕೊಂಬೆಟ್ಟು ಹಾಗೂ ಶ್ರೀ ನಿಧಿ ಆರ್ಯಾಪು ಇವರಿಗೆ ತರಬೇತಿ ನೀಡಿರುತ್ತಾರೆ .
