‌ಇರ್ವತ್ತೂರು ಪದವು: ಸುನ್ನಿ ಬಾಲ ಸಂಘ ಸಮಿತಿ ರಚನೆ

0

ಪುತ್ತೂರು: ಮದ್ರಸತ್ತು ದೀನಿಯ್ಯಾ ಇದರ 2025 -26 ನೇ ಸಾಲಿನ ಸುನ್ನಿ ಬಾಲ ಸಂಘ (ಎಸ್. ಬಿ. ಎಸ್) ಇದರ ನೂತನ ಸಮಿತಿ ರಚನೆ ಮೇ.19ರಂದು ಬದ್ರಿಯಾ ಜುಮಾ ಮಸೀದಿ ಆವರಣದಲ್ಲಿ ನಡೆಯಿತು.


ಕಾರ್ಯಕ್ರಮವು ಅಶ್ಬಾಕ್ ಸ- ಅದಿ ಕಟ್ಟತ್ತಾರ್ ಇವರ ದುಹಾದೊಂದಿಗೆ ಆರಂಭವಾಯಿತು. ಅಧ್ಯಕ್ಷತೆಯನ್ನು ಸರ್ವನ್ ಸ- ಅದಿ ಕಾಜೂರು ವಹಿಸಿದ್ದರು. ಇವರಿಬ್ಬರ ನೇತೃತ್ವದಲ್ಲಿ ಎಸ್. ಬಿ. ಎಸ್ ರೂಪೀಕರಣವಾಯಿತು.


ಮದ್ರಸ ಲೀಡರ್ ಗಳಾಗಿ ಫಾಝಿಲ್ ಸಾಹುಲ್ ಹಕೀಂ , ರೀಹಾ ಫಾತಿಮ, ಅಧ್ಯಕ್ಷರಾಗಿ ಮೊಹಮ್ಮದ್ ಅಶ್ಹದ್, ಮುಖ್ಯ ಕಾರ್ಯದರ್ಶಿಯಾಗಿ ಮುಹಮ್ಮದ್ ಫೈಝ್, ಕೋಶಾಧಿಕಾರಿಯಾಗಿ ಮುಹಮ್ಮದ್ ಅಲ್ಪಾಝ್, , ಉಪಾಧ್ಯಕ್ಷರಾಗಿ ಮುಹಮ್ಮದ್ ಫಝಲ್, ಅಬ್ದುಲ್ ರಹಿಮಾನ್, ಕಾರ್ಯದರ್ಶಿಯಾಗಿ ಮುಹಮ್ಮದ್ ಅಮನ್,ಮುಹಮ್ಮದ್ ಶಾಝಿಲ್, ಆರೋಗ್ಯ ಇಲಾಖ ಮೇಲ್ವಿಚಾರಣೆ ಖತೀಜಾ ಶಮ್ಲಾ, ಸಾಂಸ್ಕೃತಿಕ ಕಾರ್ಯದರ್ಶಿ ಫಾತಿಮ ಸಲ್ವಾ, ಸದಸ್ಯರಾಗಿ ಮುಹಮ್ಮದ್ ಮುಫೀದ್, ಮುಹಮ್ಮದ್ ಫಝಲ್, ಮುಹಮ್ಮದ್ ಫಾಹಿಮ್, ಮುಹಮ್ಮದ್ ಅಝಾಮ್, ಮುಹಮ್ಮದ್ ಇಶಾಮ್ ಆಯ್ಕೆಯಾಗಿರುತ್ತಾರೆ.
ಹುಡುಗರ ವಿಭಾಗದಲ್ಲಿ ಗ್ರೂಪ್ ಲೀಡರ್ ಆಗಿ ಮುಹಮ್ಮದ್ ಅಲ್ಫಾಝ್, ಮತ್ತು ಮುಹಮ್ಮದ್ ಫೈಝ್, ಹುಡುಗಿಯರ ವಿಭಾಗದಲ್ಲಿ ಫಾತಿಮತ್ ಶಭಾ
ಮತ್ತು ಖತೀಜಾ ಶಮ್ಲ ಆಯ್ಕೆಯಾಗಿದ್ದಾರೆ. ಕಾರ್ಯಕ್ರಮದಲ್ಲಿ ಎಲ್ಲರನ್ನೂ ಮುಹಮ್ಮದ್ ಅಲ್ಫಾಝ್ ಸ್ವಾಗತಿಸಿ ವಂದಿಸಿದರು. ಮೂರು ಸ್ವಲಾತ್ ನೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

LEAVE A REPLY

Please enter your comment!
Please enter your name here