ಬೆಟ್ಟಂಪಾಡಿ: ಪುತ್ತೂರು/ ಸುಳ್ಯ ವಲಯ ಮಟ್ಟದ ಅಂತರ್ ಕಾಲೇಜ್ ಎನ್ಎಸ್ಎಸ್ ಫೆಸ್ಟ್ , ಸಮನ್ವಯ 2K25

0

ಬೆಟ್ಟಂಪಾಡಿ: ಪುತ್ತೂರು/ ಸುಳ್ಯ ವಲಯ ಮಟ್ಟದ ಅಂತರ್ ಕಾಲೇಜ್ ಎನ್ಎಸ್ಎಸ್ ಫೆಸ್ಟ್ , ಸಮನ್ವಯ 2K25 ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿನ ಎನ್ಎಸ್ಎಸ್ ಘಟಕಗಳ ವತಿಯಿಂದ ಮೇ.22 ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಸುಮಾರು 7 ಕಾಲೇಜುಗಳಿಂದ ಸುಮಾರು 130ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು.
ಉದ್ಘಾಟನಾ ಸಮಾರಂಭವನ್ನು ಬ್ರೈಟ್ ವೇ ಇಂಡಿಯಾ ಕನ್ಸಲ್ಟೆನ್ಸಿ ಮತ್ತು ಅಲೈಡ್ ಸರ್ವಿಸ್ ಮಂಗಳೂರು ಇದರ ಮಾಲಕ ಮನಮೋಹನ ರೈ ಚೆಲ್ಯಡ್ಕ ನೆರವೇರಿಸಿದರು.
ಕಾರ್ಯಕ್ರಮದ ಅತಿಥಿಯಾಗಿ ಪುತ್ತೂರು ವಲಯ ಅರಣ್ಯ ಅಧಿಕಾರಿ ಕಿರಣ್ ಬಿ ಎಂ ಹಾಗೂ ಆಂತರಿಕ ಗುಣಮಟ್ಟ ಭರವಸಾ ಕೋಶ ಇದರ ಸಂಚಾಲಕ ಡಾ. ಕಾಂತೇಶ್ ಎಸ್ ಇವರು ಉಪಸ್ಥಿತರಿದ್ದರು.

ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ. ಸುಬ್ರಹ್ಮಣ್ಯ ಕೆ ಇವರು ಅಧ್ಯಕ್ಷ ಸ್ಥಾನವನ್ನು ವಹಿಸಿ, ಎನ್ಎಸ್ಎಸ್ ಸ್ವಯಂಸೇವಕರ ಕ್ರಿಯಾಶೀಲತೆಯ ಬಗ್ಗೆ ಮಾತನಾಡಿದರು. ಘಟಕ ನಾಯಕಿ ಮಮತಾ ಕೆ ಕಾರ್ಯಕ್ರಮ ನಿರೂಪಿಸಿದರು. ಯೋಜನಾಧಿಕಾರಿ ಡಾ. ಯೋಗೀಶ್ ಎಲ್ ಎನ್ ರವರು ಪ್ರಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿ, ಡಾ. ಲಾಯ್ಡ್ ವಿಕ್ಕಿ ಡಿಸೋಜ ರವರು ವಂದಿಸಿದರು.ಸ್ವಯಂ ಸೇವಕರಿಗೆ 5 ವಿವಿಧ ಸ್ಪರ್ಧೆಗಳನ್ನು ಆಯೋಜಿಸಿಲಾಗಿದ್ದು ಎಲ್ಲಾ ಸ್ಪರ್ದಾಳುಗಳು ಉತ್ಸಾಹದಿಂದ ಸ್ಪರ್ಧೆಗಳಲ್ಲಿ ಭಾಗವಹಿಸಿದರು.


ಸಮಾರೋಪ ಸಮಾರಂಭ ಕಾರ್ಯಕ್ರಮ ಮಧ್ಯಾಹ್ನ ನಡೆಯಿತು. ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಂಗಳೂರು ವಿಶ್ವವಿದ್ಯಾಲಯ ಎನ್ಎಸ್ಎಸ್ ಸಂಯೋಜನಾಧಿಕಾರಿ ಡಾ. ಶೇಷಪ್ಪ ಕೆ ಅಮಿನ್ ,ಸಮಾಜ ಸೇವಕ ಕರುಣಾಕರ ರೈ ಕೋರ್ಮಂಡ, ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕ ಡಾ ಕಾಂತೇಶ್ ಎಸ್ ಹಾಗೂ ಪುತ್ತೂರು ವಲಯದ ಸಂಚಾಲಕರು, ಉಪ್ಪಿನಂಗಡಿ ಕಾಲೇಜಿನ ಎನ್ ಎಸ್ ಎಸ್ ಯೋಜನಾಧಿಕಾರಿ ಡಾ. ಹರಿಪ್ರಸಾದ್ ಎಸ್ ಉಪಸ್ಥಿತರಿದ್ದರು.

ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಕನ್ನಡ ವಿಭಾಗ ಪ್ರಾಧ್ಯಾಪಕ ಡಾ. ಸುಬ್ರಹ್ಮಣ್ಯ ಕೆ ಇವರು ಅಧ್ಯಕ್ಷೀಯ ಭಾಷಣ ಮಾಡಿದರು. ಯೋಜನಾಧಿಕಾರಿಗಳಾದ ಡಾ. ಲಾಯ್ಡ್ ವಿಕ್ಕಿ ಡಿಸೋಜ ರವರು ಸ್ಪರ್ಧೆಗಳ ಫಲಿತಾಂಶವನ್ನು ತಿಳಿಸಿದರು. . ಸ್ವಯಂಸೇವಕಿ ದೀಕ್ಷಿತ ಸ್ವಾಗತಿಸಿ, ಯೋಜನಾಧಿಕಾರಿ ಗಳಾದ ಡಾ. ಯೋಗೀಶ್ ಎಲ್ ಎನ್ ವಂದಿಸಿದರು.ಘಟಕ ನಾಯಕಿ ಸುಚಿತ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here