ವಿಟ್ಲ: ಗಾಳಿ ಮಳೆಯಿಂದಾಗಿ ಅನಂತಾಡಿ ಸಮೀಪದ ಗೋಳಿಕಟ್ಟೆ ಎಂಬಲ್ಲಿ ಚಲಿಸುತ್ತಿದ್ದ ಆಟೋದ ಮೇಲೆ ಮರ ಬಿದ್ದು ಆಟೋ ರಿಕ್ಷಾವೊಂದಕ್ಕೆ ಹಾನಿಯಾದ ಘಟನೆ ನಡೆದಿದೆ.

ಆಟೋ ಚಾಲಕ ಸ್ಥಳೀಯ ನಿವಾಸಿ ಪ್ರಕಾಶ್ ಎಂಬವರಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ.