ಮೇ.26: ಉಪ್ಪಿನಂಗಡಿಯಲ್ಲಿ ಬರಕಹ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ಉದ್ಘಾಟನೆ

0

ಉಪ್ಪಿನಂಗಡಿ: ಬರಕಹ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ಉದ್ಘಾಟನಾ ಸಮಾರಂಭ ಇಲ್ಲಿನ ಎಚ್.ಎಂ. ಅಡಿಟೋರಿಯಂನಲ್ಲಿ ಮೇ 26ರಂದು ರಾತ್ರಿ 7:30ಕ್ಕೆ ನಡೆಯಲಿದೆ.


ಮುಖ್ಯ ಅತಿಥಿಗಳಾಗಿ ಪುತ್ತೂರು ವಿಧಾನ ಸಭಾಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ, ಬರಕಹ್ ಇಂಟರ್ ನ್ಯಾಷನಲ್ ಸ್ಕೂಲ್ ಮತ್ತು ಕಾಲೇಜಿನ ನಿರ್ದೇಶಕರಾದ ಮೊಹಮ್ಮದ್ ಅಶ್ರಫ್, ಝೆಡ್.ಪಿ. ಸ್ಟ್ಯಾಂಡಿಂಗ್ ಎಜ್ಯುಕೇಶನಲ್ ಕಮಿಟಿಯ ಮಾಜಿ ಅಧ್ಯಕ್ಷರಾದ ಶಾಹುಲ್ ಹಮೀದ್, ಡೆಪ್ಯುಟಿ ರಿಜಿಸ್ಟರರ್ ಸಲೀಂ ಬಿ.ಕೆ., ಪುತ್ತೂರು ನಗರ ಕಾಂಗ್ರೆಸ್ನ ಅಧ್ಯಕ್ಷರಾದ ಮೊಹಮ್ಮದ್ ಅಲಿ, ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೊಫೆಸರ್ ಡಾ. ನಂದೀಶ್ ವೈ.ಡಿ., ಅಡ್ಯಾರ್‌ನ ಬರಕಹ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ಉಪಪ್ರಾಂಶುಪಾಲರಾದ ಸೌಸ್ರೀನ್, ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಅಝೀಝ್ ಬಸ್ತಿಕ್ಕಾರ್, ಮಾಡನ್ನೂರು ಜುಮಾ ಮಸೀದಿಯ ಖತೀಬರಾದ ಹಾಜಿ ಎಸ್.ಬಿ. ದಾರಿಮಿ, ನೆಕ್ಕಿಲಾಡಿ ಉಮರುಲ್ ಫಾರೂಕ್ ಜುಮಾ ಮಸೀದಿಯ ಅಧ್ಕ್ಷರಾದ ಹಾಜಿ ಮೊಹಮ್ಮದ್ ನೆಕ್ಕಿಲಾಡಿ, ಉಪ್ಪಿನಂಗಡಿ ಗ್ರಾ.ಪಂ. ಸದಸ್ಯರಾದ ತೌಸೀಫ್ ಯು.ಟಿ., ವಕೀಲರಾದ ಅಶ್ರಫ್ ಅಗ್ನಾಡಿ, ಉಪ್ಪಿನಂಗಡಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷರಾದ ಶಬೀರ್ ಕೆಂಪಿ, ಕೆ.ಪಿ.ಸಿ.ಸಿ. ಅಲ್ಪಸಂಖ್ಯಾತರ ಘಟಕದ ಕಾರ್ಯದರ್ಶಿ ನಝೀರ್ ಎಂ.ಬಿ., ಉದ್ಯಮಿ ಇಬ್ರಾಹೀಂ ಆಚಿ ಭಾಗವಹಿಸಲಿದ್ದಾರೆ ಎಂದು ಗೈಡೆನ್ಸ್ ಎಜ್ಯುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್ ಹಾಗೂ ಸಿಬಿಎಸ್‌ಇ ನವದೆಹಲಿಗೆ ಸಂಯೋಜಿತಗೊಂಡ ಬರಕಹ್ ಇಂಟರ್‌ನ್ಯಾಷನಲ್ ಸ್ಕೂಲ್ ಮತ್ತು ಕಾಲೇಜಿನ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here