ಪುತ್ತೂರು: ಬಹುನಿರೀಕ್ಷಿತ ಹೈಸ್ಕೂಲ್ ಮಕ್ಕಳ ಶೈಕ್ಷಣಿಕ ಬದುಕಾಧರಿತ ಕತೆಯನ್ನೊಳಗೊಂಡ ʼಸ್ಕೂಲ್ ಲೀಡರ್ ʼ ಚಿತ್ರದ ಪ್ರೀಮಿಯರ್ ಪ್ರದರ್ಶನ ನಗರದ ಜಿ ಎಲ್ ವನ್ ಮಾಲ್ ನ ಭಾರತ್ ಸಿನಿಮಾಸ್ ನಲ್ಲಿ ಮೇ.27ರಂದು ನಡೆಯಿತು.
ಈ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕ ಸತ್ಯೇಂದ್ರ ಪೈ, ಸಹನಿರ್ಮಾಪಕರಾದ ಸುದರ್ಶನ್ ಶಂಕರ್, ಚಿತ್ರದ ನಿರ್ದೇಶಕ ರಝಾಕ್ ಪುತ್ತೂರು, ಸಹ ನಿರ್ದೇಶಕ ಅಕ್ಷತ್ ವಿಟ್ಲ, ಚಿತ್ರದ ನಾಯಕಿ ದೀಕ್ಷಾ ರೈ, ಚಲನಚಿತ್ರ ಹಂಚಿಕೆದಾರ ಬಾಲಕೃಷ್ಣ ಶೆಟ್ಟಿ, ಪೆನ್ಸಿಲ್ ಬಾಕ್ಸ್ ಚಿತ್ರದ ನಿರ್ಮಾಪಕ ದಯಾನಂದ ರೈ ಬೆಟ್ಟಂಪಾಡಿ, ಬಾಲ ಕಲಾವಿದರಾದ ರಕ್ಷಾ ಶೆಟ್ಟಿ, ಪ್ರಿಯಾಲ್ ಸೇರಿದಂತೆ ಪುತ್ತೂರಿನ ಹಲವು ಪ್ರಮುಖ ಗಣ್ಯರು ಚಲನಚಿತ್ರ ವೀಕ್ಷಿಸಿ ಬಾಲ ಕಲಾವಿದರ ಮತ್ತು ತುಳು ಚಿತ್ರರಂಗದ ದಿಗ್ಗಜ ಕಲಾವಿದರಾದ ದೀಪಕ್ ರೈ ಪಾಣಾಜೆ, ಅರವಿಂದ ಬೋಳಾರ್, ಬೋಜರಾಜ್ ವಾಮಂಜೂರು ಮತ್ತು ಹಿರಿಯ ನಟ ರಮೇಶ್ ಭಟ್ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ತುಂಬಿದ ಚಿತ್ರ ಮಂದಿರದಲ್ಲಿ ಪ್ರೀಮಿಯರ್ ಶೋ ಪ್ರದರ್ಶನಗೊಂಡಿದ್ದು, ಮೇ.30ರಂದು ದ.ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.