ನಿಡ್ಪಳ್ಳಿ: ಬೆಟ್ಟಂಪಾಡಿ ಪದವಿ ಪೂರ್ವ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಡಾl ಅಬ್ದುಲ್ ರಝಾಕ್.ಕೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಹಿಂದೆ ಮೊಂಟೆಪದವು, ಕೃಷ್ಣಾಪುರ- ಕಾಟಿಪಳ್ಳ,ಹಾಗೂ ನ್ಯೂಪಡ್ಪು- ಹರೇಕಳ(ಹಾಜಬ್ಬ) ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಭಾರ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದ ಇವರು ಪದೋನ್ನತಿ ಹೊಂದಿ ಬೆಟ್ಟಂಪಾಡಿ ಪಿ.ಯು ಕಾಲೇಜಿನ ಪ್ರಾಂಶುಪಾಲರಾಗಿ ಮೇ.17ರಂದು ಅಧಿಕಾರ ಸ್ವೀಕರಿಸಿದರು. ಇವರು ಗುತ್ತಿಗಾರು, ಗುರುಪುರ, ಕುರ್ನಾಡು ಮುಡಿಪು, ಶಕ್ತಿನಗರ ಮಂಗಳೂರು ಇಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. 2016-17ನೇ ಸಾಲಿನಲ್ಲಿ ಕರ್ನಾಟಕ ಸರಕಾರದ ರಾಜ್ಯ ಮಟ್ಟದ ಉಪನ್ಯಾಸಕ ಪ್ರಶಸ್ತಿ ಪಡೆದಿರುತ್ತಾರೆ. ದ್ವಿತೀಯ ಪಿ.ಯು.ಸಿ ಅರ್ಥಶಾಸ್ತ್ರ ಪಠ್ಯಪುಸ್ತಕ ರಚನಾ ಸಮಿತಿ ಹಾಗೂ ಅನುವಾದ ಸಮಿತಿಗಳಲ್ಲಿ ಸದಸ್ಯನಾಗಿ ಕರ್ತವ್ಯ ನಿರ್ವಹಿಸಿದ ಅನುಭವಿ. ರಾಜ್ಯ ಮಟ್ಟದ ಅರ್ಥಶಾಸ್ತ್ರ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದವರು.
ಇವರು ಅರ್ಥಶಾಸ್ತ್ರ ಎಂ.ಎ ಪದವಿ ಪಡೆದು ಬಿ.ಎಡ್, ಎಂ.ಬಿ.ಎ, ಎಂ.ಫಿಲ್, ಪಿ.ಎಚ್.ಡಿ ಪದವಿ ಪಡೆದಿದ್ದಾರೆ.