ಬೆಂಗಳೂರಿನಲ್ಲಿ ಹಲವು ಶಾಖೆಯುಳ್ಳ ವಿದ್ಯುದ್ದೀಕರಣ, ಹೈ ವೋಲ್ಟೇಜ್ , ಟ್ರಾನ್ಸಪೊರ್ಮರ್, ಆಟೋಮೇಶನ್, ಪವರ್ ಇಲೆಕ್ಟ್ರಾನಿಕ್ಸ್, ಗ್ರೀನ್ ಎನರ್ಜಿ ಮುಂತಾದ ಕ್ಷೇತ್ರಗಳ ತಂತ್ರಜ್ಞಾನದಲ್ಲಿ ಜಗತ್ತಿಗೆ ಹೆಸರುವಾಸಿಯಾದ ಜಪಾನ್ ದೇಶದಲ್ಲಿ ಮುಖ್ಯ ಶಾಖೆ ಇರುವ ಬಹುರಾಷ್ಟ್ರೀಯ ಹಿಟಾಚಿ ಎನರ್ಜಿ ಕಂಪೆನಿಗೆ ಜೂ.6ರಂದು ವಿದ್ಯಾರ್ಥಿಗಳ ಕ್ಯಾಂಪಸ್ ಉದ್ಯೋಗ ಸಂದರ್ಶನ ಕಾರ್ಯಕ್ರಮವು ಸಂಸ್ಥೆಯ ಕೌಶಲ್ಯ ಸಭಾಭವನದಲ್ಲಿ ನಡೆಯಿತು. ಸದ್ರಿ ಕಾರ್ಯಕ್ರಮದಲ್ಲಿ ಶ್ರೀ ಮಹಾಲಿಂಗೇಶ್ವರ ಐಟಿಐ ಕೊಂಬೆಟ್ಟು ಪುತ್ತೂರು, ಸರ್ಕಾರಿ ಮಹಿಳಾ ಐಟಿಐ ನರಿಮೊಗರು, ಸರ್ಕಾರಿ ಐಟಿಐ ವಿಟ್ಲ, ಸುಪ್ರಜಿತ ಐಟಿಐ ವಿಟ್ಲ, ಇವುಗಳಿಂದ ಎಲೆಕ್ಟ್ರಿಷಿಯನ್, ಇಲೆಕ್ಟ್ರಾನಿಕ್ಸ್ ಮೆಕಾನಿಕ್ ವೃತ್ತಿಗಳ ಸುಮಾರು 102 ವಿದ್ಯಾರ್ಥಿಗಳು ಭಾಗವಹಿಸಿದ್ದರು.