ಕುಂಜಾರು ನಿವಾಸಿ ಸೇಸಪ್ಪ ಪೂಜಾರಿ ನಿಧನ

0

ಪುತ್ತೂರು: ಪಡ್ನೂರು ಗ್ರಾಮದ ಕುಂಜಾರು ನಿವಾಸಿ ಸೇಸಪ್ಪ ಪೂಜಾರಿ(75ವ.)ರವರು ವಯೋಸಹಜ ಅಲ್ಪಕಾಲದ ಅನಾರೋಗ್ಯದಿಂದ ಜೂ.11ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು.


ಸೇಸಪ್ಪ ಪೂಜಾರಿ ಅವರು ಸುಮಾರು ೩೦ವರ್ಷದ ಹಿಂದೆ ಮುರದಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದರು. ಆ ಬಳಿಕ ಮನೆಯಲ್ಲೇ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. ಮೃತರು ಪತ್ನಿ ಕುಸುಮ, ಪುತ್ರರಾದ ಶೇಖರ, ಲಕ್ಷ್ಮಣ, ಶ್ರೀಧರ, ಗಂಗಾಧರ, ಪುತ್ರಿಯರಾದ ಪ್ರೇಮ, ಜಯಲಕ್ಷ್ಮೀ ಹಾಗೂ ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here