ಪುತ್ತೂರು: ಕೃಷ್ಣನಗರ ನಿವಾಸಿ, ಕುಂದಾಪುರ ಭಂಡಾರ್ಕಾರ್ಸ್ ಪದವಿ ಕಾಲೇಜಿನ ನಿವೃತ್ತ ಆಂಗ್ಲಭಾಷಾ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಮೋತಿ ಬಾ ಕೆ.ಎಸ್.ಅವರಿಗೆ ಆಂಧ್ರಪ್ರದೇಶದ ಕುಪ್ಪಂನ ದ್ರಾವಿಡಿಯನ್ ವಿಶ್ವ ವಿದ್ಯಾನಿಲಯದಿಂದ ಪಿ.ಎಚ್.ಡಿ.ಪದವಿ ದೊರೆತಿದೆ.
ಇವರು ಉಡುಪಿಯ ಎಂ.ಜಿ.ಎಂ.ಕಾಲೇಜಿನ ನಿವೃತ್ತ ಆಂಗ್ಲ ಭಾಷಾ ಪ್ರೋಫೆಸರ್ ಆಗಿರುವ ಡಾ| ಶ್ರೀನಿವಾಸ್ರವರ ಮಾರ್ಗದರ್ಶನದಲ್ಲಿ ”The Treatment of women Characters in the selected Plays of Dr. Girish Karnad’ ಎಂಬ ವಿಷಯದಲ್ಲಿ ಮಂಡಿಸಿದ ಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಲಭಿಸಿದೆ.
ಮೋತಿ ಬಾ ಅವರು ಪುತ್ತೂರು ವಿವೇಕಾನಂದ ಪದವಿ ಕಾಲೇಜಿನಲ್ಲಿ ಸುಮಾರು 10 ವರ್ಷಗಳ ಕಾಲ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸಿದ್ದರು. ಆಂಗ್ಲ ಭಾಷೆಯೊಂದಿಗೆ ಇವರು ಜರ್ಮನ್ ಭಾಷೆಯ ಪರಿಣತರಾಗಿದ್ದು ಆಸಕ್ತರಿಗೆ ಆನ್ಲೈನ್ ಕ್ಲಾಸ್ ಮಾಡುತ್ತಿದ್ದಾರೆ. ಇವರು ದೇಶ ವಿದೇಶಗಳ ಅನೇಕ ಜರ್ನಲ್ಗಳಲ್ಲಿ ತಮ್ಮ ಲೇಖನಗಳನ್ನು ಪ್ರಕಟಿಸಿದ್ದಾರೆ. ಇವರು ಪುತ್ತೂರಿನ ಕೃಷ್ಣನಗರದ ಎ.ವಿ.ಜಿ.ಶಾಲೆಯ ಆಡಳಿತಾಧಿಕಾರಿಯಾಗಿರುವ, ಕೃಷ್ಣನಗರ ನಿವಾಸಿ ಗುಡ್ಡಪ್ಪ ಗೌಡ ಬಲ್ಯ ಅವರ ಪತ್ನಿಯಾಗಿದ್ದಾರೆ.