ನೃತ್ಯಾಂತರಂಗದಲ್ಲಿ ಶಿಲ್ಪಾ ನಂಜಪ್ಪರವರಿಂದ ಅದ್ಭುತವಾದ ಕೊಡವ ಕಥೆಗಳ ಭರತನಾಟ್ಯ ರೂಪಕ

0

ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸರಣಿ ಕಾರ್ಯಕ್ರಮ ನೃತ್ಯಾಂತರಂಗದ 129ನೇ ಆವೃತ್ತಿಯಲ್ಲಿ ಖ್ಯಾತ ಭರತನಾಟ್ಯ ಕಲಾವಿದೆ ಶಿಲ್ಪಾ ನಂಜಪ್ಪರವರಿಂದ ಕೊಡವ ಕಥೆಗಳ ಆಧಾರಿತ ವಿಶೇಷ ಭರತನಾಟ್ಯ ರೂಪಕ ‘ಟೇಲ್ಸ್ ಇನ್ ಕೊಡವ ‘ ಪ್ರಸ್ತುತಗೊಂಡು ಸಭಿಕರ ಮೆಚ್ಚುಗೆ ಪಡೆಯಿತು. ಅಭ್ಯಾಗತರಾದ ಯೇಳ್ತಿಮಾರ್ ವಿಜಯಲಕ್ಷ್ಮಿ ಶೆಣೈರವರು ಶಿಲ್ಪಾರವರ ಕಲಾಪ್ರಸ್ತುತಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಕಾರ್ಯಕ್ರಮವನ್ನು ವಿದ್ವಾನ್ ದೀಪಕ್ ಕುಮಾರ್ ಆಯೋಜಿಸಿದ್ದರು. ಆದ್ಯ ಕೆ. ಕಾರ್ಯಕ್ರಮದ ನಿರೂಪಿಸಿದರು. ವಿ. ಪ್ರೀತಿಕಲಾ ಪ್ರಾರ್ಥಿಸಿದರು. ಶಂಖನಾದವನ್ನು ಶೌರೀಕೃಷ್ಣ, ಪರಿಚಯವನ್ನು ವಿಷ್ಣುಪ್ರಿಯ & ಆರಾಧ್ಯ ಕೆ. ಮತ್ತು ವಿಷಯ ಮಂಡನೆಯನ್ನು ಆಪ್ತ ಚಂದ್ರಮತಿ ಮುಳಿಯ ಇವರು ಮಾಡಿದರು.

LEAVE A REPLY

Please enter your comment!
Please enter your name here