ಸವಣೂರು: ವಿದ್ಯಾರಶ್ಮಿ ವಿದ್ಯಾಲಯದ 2025-26ನೇ ಸಾಲಿನ ವಿದ್ಯಾರ್ಥಿ ಸರಕಾರ ರಚನೆಯಾಯಿತು. ವಿದ್ಯಾರ್ಥಿಸಂಘ ಅಧ್ಯಕ್ಷರಾಗಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಅವನಿ ಆರ್ ರೈ, ಉಪಧ್ಯಕ್ಷರಾಗಿ 10ನೇ ತರಗತಿಯ ಆಯಿಷತ್ ಇಹ್ ಸಾನ, ಕಾರ್ಯದರ್ಶಿಯಾಗಿ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ಶ್ರದ್ಧಾ ಕೆ ಡಿ, ಜೊತೆ ಕಾರ್ಯದರ್ಶಿಯಾಗಿ 9ನೇ ತರಗತಿಯ ಶಂತನುಕೃಷ್ಣ ಕೆ ಎ, ಪಿಯುಸಿವಿಭಾಗದ ಕ್ರೀಡಾಕಾರ್ಯದರ್ಶಿಯಾಗಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಮಹಮ್ಮದ್ ಫಾಝಿಲ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪ್ರಥಮ ಪಿಯುಸಿ ವಿಜ್ಙಾನ ವಿಭಾಗದ ವಿದಿಶಾ ಬಿ ಕೆ, ಹೈಸ್ಕೂಲ್ ವಿಭಾಗದ ಕ್ರೀಡಾ ಕಾರ್ಯದರ್ಶಿಯಾಗಿ ಒಂಬತ್ತನೇ ತರಗತಿಯ ಜಶ್ವಿತ್ ಕೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಎಂಟನೇ ತರಗತಿಯ ಕೃಪಾಲಿ ಎಸ್ ಡಿ, ಪ್ರಾಥಮಿಕ ವಿಭಾಗದ ಕ್ರೀಡಾ ಕಾರ್ಯದರ್ಶಿ ಏಳನೇ ತರಗತಿಯ ಮೋಕ್ಷ ಕೆ ಯು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಆರನೇ ತರಗತಿ ಸಮೀಕ್ಷಾ ಕೆ ಆಯ್ಕೆಯಾಗಿದ್ದಾರೆ.

ಸಂಸ್ಥೆಯ ಸಂಚಾಲಕರಾದ ಕೆ ಸೀತಾರಾಮ ರೈ ಸವಣೂರು, ಆಡಳಿತಾಧಿಕಾರಿ ಆಡ್ವಕೇಟ್ ಅಶ್ವಿನ್ ಎಲ್ ಶೆಟ್ಟಿಯವರು ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ ಎಂದು ಸಂಸ್ಥೆಯ ಪ್ರಾಂಶುಪಾಲೆ ಶಶಿಕಲಾ ಎಸ್ ಆಳ್ಚ ತಿಳಿಸಿದ್ದಾರೆ.