ಚಾರ್ವಾಕ ಶಾಲಾ ಮಂತ್ರಿ ಮಂಡಲ ರಚನೆ- ನಾಯಕನಾಗಿ ಯಶ್ವಿನ್, ಉಪನಾಯಕನಾಗಿ ಪೃಥ್ವಿನ್ ಆಯ್ಕೆ

0

ಕಾಣಿಯೂರು: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಚಾರ್ವಾಕ ಇಲ್ಲಿನ 2025-2026ನೇ ಶೈಕ್ಷಣಿಕ ಸಾಲಿನ ಶಾಲಾ ಸಂಸತ್ತಿನ ಚುನಾವಣೆಯು ಇವಿಎಂ ಮಾದರಿಯಲ್ಲಿ ನಡೆಯಿತು.

ಶಾಲಾ ವಿದ್ಯಾರ್ಥಿ ನಾಯಕನಾಗಿ 8ನೇ ತರಗತಿಯ ಯಶ್ವಿನ್, ಉಪನಾಯಕನಾಗಿ 7ನೇ ತರಗತಿಯ ಪೃಥ್ವಿನ್ ಆಯ್ಕೆಯಾದ ರು. ವಿದ್ಯಾರ್ಥಿಗಳು ಪ್ರಪ್ರಥಮವಾಗಿ ಇ ವಿ ಎಂ ಮಾದರಿಯಲ್ಲಿ ಮತ ಚಲಾಯಿಸಿ ಸಂಭ್ರಮಿಸಿದರು. ಆಧುನಿಕ ತಂತ್ರಜ್ಞಾನ ಆಧಾರಿತ ಮತ ಚಲಾವಣೆಯೊಂದಿಗೆ ವಿದ್ಯಾರ್ಥಿಗಳು ಮತಗಟ್ಟೆ ಕೇಂದ್ರ, ಚುನಾವಣಾ ಸಿಬ್ಬಂದಿಗಳ ಕಾಯ೯ ವೈಖರಿ, ವೋಟರ್ ID ಬಳಕೆ, ವಿಶೇಷಚೇತನರು ಮತ್ತು ಅಶಕ್ತರಿಗಿರುವ ವಿಶೇಷ ಮತ ಚಲಾವಣೆ ವಿಧಾನಗಳು, ನೋಟಾ ಓಟು, ಪಕ್ಷಗಳ ವಿವಿಧ ಚಿಹ್ನೆಗಳ ಅಗತ್ಯತೆ, ಮತ ಎಣಿಕೆಯ ವಿಧಾನ, ಫಲಿತಾಂಶ ಪ್ರಕಟಣೆ ಮುಂತಾದ ಚುನಾವಣಾ ಕಾಯ೯ಗಳ ಬಗ್ಗೆ ಸ್ಥೂಲವಾಗಿ ಅರಿತುಕೊಂಡರು. ಶಾಲಾ ಮಂತ್ರಿಮಂಡಲದ ಸಚಿವರಾಗಿ ಕು.ಪ್ರೇಮ ಜಶ್ಮಿ, ತನ್ವಿ, ಮಾನ್ಯ, ಸಿಂಚನ, ವಿನ್ಯ, ಘನಶ್ರೀ, ಮಾಸ್ಟರ್ ಹರ್ಷಿತ್, ಚರಣ್, ಮನ್ವಿತ್, ವಿಜೇತ್ ಆಯ್ಕೆಯಾದರು. ಶಾಲಾ ಮುಖ್ಯಗುರು ರಾಮೇಶಿ ಎಸ್.ರವರು ಶಾಲಾ ನೂತನ ಮಂತ್ರಿಮಂಡಲದ ರಾಜ್ಯಪಾಲರಾಗಿ ಪ್ರಮಾಣವಚನ ಬೋಧಿಸಿದರು. ಜಿಪಿಟಿ ಶಿಕ್ಷಕಿ ನಯನರವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಂವಿಧಾನಿಕ ಆಶಯಗಳೊಂದಿಗೆ ಮತದಾನದ ಮಹತ್ವದ ಬಗ್ಗೆ ವಿವರಿಸಿದರು. ಟಿಜಿಟಿ ಶಿಕ್ಷಕ ಚೆನ್ನಪ್ಪ ಗೌಡರವರು ಮತಗಟ್ಟೆ ಕೇಂದ್ರವನ್ನು ಅಣಿಗೊಳಿಸಿದರು. ಅತಿಥಿ ಶಿಕ್ಷಕರಾದ ಜೀವಿತಾ ಮತ್ತು ಶ್ವೇತಾರವರು ಇ ವಿ ಎಂ ಮಾದರಿಯಲ್ಲಿ ಮತ ಚಲಾವಣೆ ಪ್ರಕ್ರಿಯೆಯನ್ನು ನಿವ೯ಹಿಸಿದರು. ಸಹಶಿಕ್ಷಕಿ ಆಶಾಲತಾರವರು ಮತ ಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸಿದರು.

LEAVE A REPLY

Please enter your comment!
Please enter your name here