ಸಾಮಾನ್ಯವಾಗಿ ಹೂವುಗಳನ್ನು ಪೂಜೆಗೆ ಮಾತ್ರ ಬಳಸಲಾಗುತ್ತದೆ. ದಾಸವಾಳ ಹೂವು ದೇವರ ನಿತ್ಯ ಪೂಜೆಗೆ ಬಳಕೆಯಾಗುತ್ತದೆ. ಆದರೆ ಈ ಹೂವಿನಲ್ಲಿ ಔಷಧೀಯ ಗುಣಗಳಿವೆ ಎಂಬುದು ಹಲವರಿಗೆ ಗೊತ್ತಿರಲ್ಲಿಕ್ಕಿಲ್ಲ. ದಾಸವಾಳವು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದೆ. ಹೂವು ಅನೇಕ ಆರೊಗ್ಯ ಸಮಸ್ಯೆಗಳನ್ನು ದೂರ ಮಾಡುತ್ತದೆ.

ಕೂದಲಿಗೆ ದಾಸವಾಳದ ಎಣ್ಣೆಯನ್ನು ಬಳಸುವ ಬಗ್ಗೆ ಗೊತ್ತಿರಬಹುದು. ಇದು ಕೂದಲ ಆರೋಗ್ಯಕ್ಕೆ ಮಾತ್ರವಲ್ಲ, ನಮ್ಮ ದೇಹದ ಆರೋಗ್ಯಕ್ಕೂ ಬಹಳಷ್ಟು ಪ್ರಯೋಜನಕಾರಿಯಾಗಿದೆ. ದಾಸವಾಳ ಹೂವಿನ ತೈಲದ ಬಳಕೆಯಿಂದ ಚರ್ಮಕ್ಕೆ ಹೊಳಪು ಬರುತ್ತದೆ. ಹೂವು ಹಾಗೂ ಎಲೆಗಳನ್ನು ಒಣಗಿಸಿ, ಸುಟ್ಟ ಬಳಿಕ ಸಿಗುವ ಬೂದಿಯನ್ನು ಹಚ್ಚಿದರೆ, ಕಣ್ಣಹುಬ್ಬುಗಳು ಹೊಳಪು ಪಡೆಯುತ್ತವೆ. ಈ ಸಸ್ಯದ ಬೇರುಗಳನ್ನು ಎಣ್ಣೆಯಲ್ಲಿ ಹಾಕಿ, ಬೇರಿನಲ್ಲಿರುವ ನೀರಿನ ಅಂಶ ಆವಿಯಾಗುವವರೆಗೂ ಕುದಿಸಬೇಕು. ಗಾಯಗಳಿಗೆ ಈ ಎಣ್ಣೆ ಲೇಪಿಸಿದರೆ ಗುಣಮುಖವಾಗುವುದು.
ಎಲ್ಲಾ ಋತುವಿನಲ್ಲಿ ದಾಸವಾಳ ಹೂ ಬಿಡುತ್ತದೆ. ಆಯುರ್ವೇದದಲ್ಲಿ ಅನೇಕ ರೋಗಗಳ ಚಿಕಿತ್ಸೆಗೆ ದಾಸವಾಳ ಬಳಕೆ ಮಾಡಲಾಗುತ್ತದೆ. ದಾಸವಾಳ ಹೂವು, ಎಲೆ, ಕಾಂಡ, ಬೀಜ ಮತ್ತು ಬೇರು ಎಲ್ಲವೂ ಔಷಧದ ಬಳಕೆಯಾಗುತ್ತದೆ. ದಾಸವಾಳ ಹೂವು ಸೌಂದರ್ಯವರ್ಧಕ ಮತ್ತು ಔಷಧೀಯ ಪದಾರ್ಥಗಳ ತಯಾರಿಕೆಗೆ ಸಹಕಾರಿ.
ದಾಸವಾಳವು ಕ್ಯಾಲ್ಸಿಯಂ, ಕಬ್ಬಿಣ, ಥಯಾಮಿನ್, ರೈಬೋಫ್ಲಾವಿನ್, ನಿಯಾಸಿನ್ ಪೋಷಕಾಂಶ ಹೊಂದಿದೆ. ಇದು ಆಂಟಿಆಕ್ಸಿಡೆಂಟ್, ಆಂಟಿಸೆಪ್ಟಿಕ್, ಕ್ಯಾನ್ಸರ್ ವಿರೋಧಿ ಗುಣ ಹೊಂದಿದೆ. ಇದು ಸ್ನಾಯು ಸೆಳೆತದಿಂದ ಪರಿಹಾರ ನೀಡುತ್ತದೆ. ಇದು ಮಲಬದ್ಧತೆ ನಿವಾರಿಸುತ್ತದೆ. ದಾಸವಾಳ ಹೂವು ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ. ಇದು ಉರಿಯೂತ ನಿವಾರಣೆ, ಬ್ಯಾಕ್ಟೀರಿಯಾ ವಿರೋಧಿ, ನ್ಯೂರೋಪ್ರೊಟೆಕ್ಟಿವ್ ಪರಿಣಾಮ ಹೊಂದಿದೆ. ದಾಸವಾಳವು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಿಸಲು ಸಹಕಾರಿ. ಇದು ಹೃದಯದ ಆರೋಗ್ಯ ಬಲಪಡಿಸುತ್ತದೆ.
ರಕ್ತದ ಸಕ್ಕರೆಯ ಮಟ್ಟ ನಿಯಂತ್ರಿಸುತ್ತದೆ ದಾಸವಾಳ. ಇನ್ಸುಲಿನ್ ಪ್ರತಿರೋಧ ಮತ್ತು ಮಧುಮೇಹ ಮೆಲ್ಲಿಟಸ್ ಟೈಪ್ 2 ನಿರ್ವಹಣೆಗೆ ದಾಸವಾಳ ಸಹಕಾರಿ. ಕೂದಲಿನ ಆರೋಗ್ಯಕ್ಕೆ ದಾಸವಾಳ ಸಹಕಾರಿ. ದಾಸವಾಳದ ಎಲೆಗಳು ಮತ್ತು ಹೂವುಗಳು ಕೂದಲಿನ ಆರೋಗ್ಯಕ್ಕೆ ಪ್ರಯೋಜನಕಾರಿ. ಇದು ಕೂದಲು ಕಿರುಚೀಲಗಳಿಗೆ ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ. ದಾಸವಾಳ ಹೂವು ತೂಕ ನಿರ್ವಹಣೆಗೆ ಸಹಕಾರಿ. ದಾಸವಾಳ ಹೂವಿನಿಂದ ತಯಾರಿಸಿದ ಚಹಾ ಸಕ್ಕರೆ ಮತ್ತು ಪಿಷ್ಟವನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಇದರಲ್ಲಿರುವ ಪಾಲಿಫಿನಾಲ್ಗಳು ಮತ್ತು ಫ್ಲೇವನಾಯ್ಡ್ಗಳು ತೂಕ ನಿಯಂತ್ರಿಸುತ್ತದೆ.
https://shorturl.at/lLmAh
https://shorturl.at/adY4w
https://shorturl.at/u59bo