ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ ಸಂಗಮ ಎಂಬ ಘೋಷ ವಾಕ್ಯದೊಂದಿಗೆ ಈ ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಯೋಗ ವಿಜ್ಞಾನದ ಮೊದಲ ಶಿಕ್ಷಕ. ಆದಿ ಯೋಗಿ ಶಿವನಿಂದ ಅನುಗ್ರಹಿಸಲ್ಪಟ್ಟ ಮಹರ್ಷಿ ಪತಂಜಲಿಯಿಂದ ಲೋಕಾರ್ಪಣೆಯಾದ ಮಹಾವಿದ್ಯೆ ಯೋಗ. ಜಾತಿ, ಮತ ,ದೇಶ, ಕಾಲಗಳ ವ್ಯಾಪ್ತಿಯನ್ನು ಮೀರಿ ಸರ್ವರಿಗೂ ಸಲ್ಲುವಂತಹ ಜೀವನ ಕಲೆ ಆಧ್ಯಾತ್ಮಿಕ ಸಾರ ಯೋಗ. ಇಂತಹ ಅಮೂಲ್ಯ ವಿದ್ಯೆ ವಿಶ್ವವ್ಯಾಪ್ತಿಯಾಗಿ ಜನ ಜೀವನದಲ್ಲಿ ಜೀವನ ಕಲೆಯಾಗಿ ಬೆರೆತು ದೇಹ ಹಾಗೂ ಮನಸ್ಸನ್ನು ಜೋಡಿಸಿ ಸಾಧಕನ ಸಾಧನ ಪಥವಾಗಬೇಕು. ವಿಶ್ವದ ಕಟ್ಟ ಕಡೆಯ ವ್ಯಕ್ತಿಗೂ ಯೋಗ ಸ್ಪರ್ಶವಾಗಬೇಕು ಎಂಬ ಉದ್ದೇಶದಿಂದ ಪ್ರತಿವರ್ಷ ಜೂನ್ 21ರಂದು ನಾವೆಲ್ಲರೂ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸುತ್ತೇವೆ.
ವಿಶ್ವ ಯೋಗ ದಿನಾಚರಣೆಯ ದಿನ ಅಂದರೆ ಜೂನ್ ತಿಂಗಳ 21ನೇ ತಾರೀಕು ಪುರಾಣ ಪ್ರಸಿದ್ಧ ಪತಂಜಲಿ ಮಹರ್ಷಿಗಳಿಂದ ಆರಂಭಿಸಲ್ಪಟ್ಟ ಈ ಯೋಗ ಆಚರಣೆ ಎಂದು ಅಂತರಾಷ್ಟ್ರೀಯ ಯೋಗ ಆಚರಣೆಯ ಮಟ್ಟಕ್ಕೆ ಏರಿ ಬಹಳ ಮಹತ್ವವನ್ನು ಪಡೆದಿದೆ. ಈ ಯೋಗ ಆಚರಣೆಯನ್ನು ಇಷ್ಟು ಉತ್ತುಂಗಕ್ಕೆ ಏರಿಸಿದ ಈ ನಮ್ಮ ರಾಷ್ಟ್ರ ಭಾರತ. ನಮ್ಮ ಪ್ರಧಾನಿ ಮೋದಿಜಿಯವರ ನೇತೃತ್ವದಲ್ಲಿ ಇಂದು ವಿಶ್ವಗುರು ಎಂಬ ಸ್ಥಾನ ಪಡೆದಿದೆ. ಈ ವರ್ಷದ ಘೋಷ ವಾಕ್ಯ ಈ ರೀತಿ ಯೋಗದ ಮಹತ್ವವನ್ನು ಪ್ರಪಂಚಕ್ಕೆ ಪರಿಚಯ ಮಾಡಿಕೊಟ್ಟ ನಮ್ಮನೇತರ ಪ್ರಧಾನಿ ಮೋದಿಜಿ ಅವರು ವಿಶ್ವದಲ್ಲಿ ಅಭಿನಂದನೆಯರು. ಈ ದಿನ ಜೂನ್ 21ನೇ ತಾರೀಕು ನಾವು ಈ ದಿನವನ್ನೇ ಈ ಆಚರಣೆಗೆ ಆಯ್ಕೆ ಮಾಡಿಕೊಂಡಿದ್ದೇವೆ ಏಕೆ … ಸೂರ್ಯನ ಸುತ್ತ ಪರಿಭ್ರಮಿಸುತ್ತಿರುವ ನಮ್ಮ ಈ ಭೂಮಿಯ ಚಲನೆಗೆ ಅನುಸಾರವಾಗಿ ಹಗಲು ರಾತ್ರಿಗಳು ಆಗುತ್ತದೆ ಎಂಬುದು ನಾವೆಲ್ಲ ತಿಳಿದಿರುವ ವಿಚಾರ. ಅದೇ ರೀತಿ ಈ ದಿನದಂದು ಸ್ಥಳೀಯ ಕಾಲಮಾನದ ರೀತಿ ಬೆಳಗ್ಗೆ 6. 06ಕ್ಕೆ ಸೂರ್ಯೋದಯ ಸಂಜೆ 6:55ಕ್ಕೆ ಅಸ್ತಮಾನ ಅಂದರೆ 13 ಗಂಟೆಗಳ ದೀರ್ಘಾವಧಿ ಹಗಲು ಉತ್ತರ ವಲಯದಲ್ಲಿರುವ ಅಮೇರಿಕಾ ಮುಂತಾದ ರಾಷ್ಟ್ರಗಳೆಲ್ಲ ಇನ್ನೂ ದೀರ್ಘವಾಗಿರುತ್ತದೆ.
ಈ ದಿನ ಅತಿ ಹೆಚ್ಚಿನ ಕಾಲಾವಧಿಯಲ್ಲಿ ಸೂರ್ಯಕಿರಣಗಳು ಭೂಮಿಯನ್ನು ಸ್ಪರ್ಶಿಸುತ್ತದೆ, ಇಂದಿನಿಂದ ಸೂರ್ಯನ ದಕ್ಷಿಣ ಅಯನ ಆರಂಭವಾಗಿ ಡಿಸೆಂಬರ್ 21 ಅತ್ಯಂತ ದೀರ್ಘ ರಾತ್ರಿ ಆಗಿರುತ್ತದೆ. ಅಲ್ಲಿಂದ ಉತ್ತರಾಯಣ ಆರಂಭ. ಇದು ಭೌಗೋಳಿಕ ನಿಯಮ. ಈ ಮಹತ್ವದ ದಿನವನ್ನು ಜೂನ್ 21 ವಿಶ್ವ ಯೋಗ ದಿನಾಚರಣೆ ಎಂದು ಆಯ್ಕೆ ಮಾಡಿಕೊಂಡಿದ್ದಾರೆ. ಈ ರೀತಿ ಇಂದಿನ ಈ ದಿನದ ಮಹತ್ವವನ್ನು ಪರಮಾರ್ಶಿಸಿ ಇಂದು ವಿಶ್ವದ ಅತಿ ದೀರ್ಘ ದಿನ. ನಮ್ಮ ಯೋಗ ಕಾರ್ಯಕ್ರಮದ ಆಚರಣೆಗೆ ಯೋಗ್ಯ ದಿನ. ಇಂದು ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಿ ,ಯೋಗ್ಯ ಆರೋಗ್ಯದ ಪ್ರಜೆಗಳಾಗಿ ನಾವೆಲ್ಲ …ಬಾಳೋಣ ಜೈ ಹಿಂದ್.

ಬರಹ: ಯಶುಭ ರೈ
ಎವಿಜಿ ಆಂಗ್ಲ ಮಾಧ್ಯಮ ಶಾಲೆ
ಬನ್ನೂರು, ಪುತ್ತೂರು