ಗೋಳಿತ್ತೊಟ್ಟು: ಸಮಸ್ತದ 100ನೇ ಸ್ಥಾಪನಾ ದಿನಾಚರಣೆ

0


ನೆಲ್ಯಾಡಿ: ಎಸ್‌ಕೆಎಸ್‌ಎಸ್‌ಎಫ್ ಗೋಳಿತೊಟ್ಟು ಶಾಖೆಯ ವತಿಯಿಂದ ಸಮಸ್ತದ 100ನೇ ಸ್ಥಾಪನಾ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ಗೋಳಿತ್ತೊಟ್ಟು ಕೊಚ್ಚಿಲ ರಹ್ಮಾನಿಯ ಜಮೀಲ ಜುಮಾ ಮಸೀದಿಯಲ್ಲಿ ನಡೆಯಿತು.


ಎಸ್‌ಕೆಎಸ್‌ಎಸ್‌ಎಫ್ ಗೋಳಿತೊಟ್ಟು ಶಾಖೆಯ ಅಧ್ಯಕ್ಷ ಹನೀಫ್ ಎಂ. ಮತ್ತು ಸಹದಿಯ ಸಮಿತಿ ಅಧ್ಯಕ್ಷ ಹರೀಫ್ ಹೆಚ್. ಅವರು ಧ್ವಜಾರೋಹಣ ನೆರವೇರಿಸಿದರು. ಗೋಳಿತ್ತೊಟ್ಟು ಆರ್‌ಜೆಜೆಂನ ಖತೀಬರಾದ ಅಬ್ದುಲ್ ರಹಿಮಾನ್ ಫೈಝಿ ದುವಾ ಮತ್ತು ವಿಷಯ ಮಂಡನೆ ಮಾಡಿದರು. ಕಾರ್ಯಕ್ರಮದಲ್ಲಿ ಹಲವಾರು ಕಾರ್ಯಕರ್ತರು, ವಿದ್ಯಾರ್ಥಿಗಳು, ಜಮಾತರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here