ಪಂಜಳ ಶಾಂತಿಗಿರಿ ವಿದ್ಯಾನಿಕೇತನ ಶಾಲಾ ಮಂತ್ರಿ ಮಂಡಲ – ಶಾಲಾ ನಾಯಕ:ಮುಹಮ್ಮದ್ ಸಫೀಜ್, ಉಪ ನಾಯಕಿ:ಸೋನಾಲಿ ರೈ ಪಿ

0

ಪುತ್ತೂರು: ಪಂಜಳ ಶಾಂತಿಗಿರಿ ವಿದ್ಯಾನಿಕೇತನ ಶಾಲೆಯ 2025- 26ನೇ ಶೈಕ್ಷಣಿಕ ಸಾಲಿನ ಮಂತ್ರಿಮಂಡಲವನ್ನು ರಚಿಸಲಾಯಿತು.
ಮತದಾನದ ಮೂಲಕ ಶಾಲಾ ನಾಯಕರನ್ನು ಆಯ್ಕೆ ಮಾಡಲಾಗಿದ್ದು, ಶೈಕ್ಷಣಿಕ ಸಾಲಿನ ಶಾಲಾ ನಾಯಕನಾಗಿ ಮಾ|ಮುಹಮ್ಮದ್ ಸಫೀಜ್(8ನೇ ತರಗತಿ) ಹಾಗೂ ಉಪ ನಾಯಕಿಯಾಗಿ ಕು|ಸೋನಾಲಿ ರೈ ಪಿ (6 ನೇ ತರಗತಿ) ಇವರು ಆಯ್ಕೆಯಾಗಿರುತ್ತಾರೆ. ಎಲೆಕ್ಟ್ರಾನಿಕ್ ವೋಟಿಂಗ್ ಪದ್ಧತಿ ಮೂಲಕ ಮತ ಚಲಾವಣೆಯನ್ನು ನಡೆಸಲಾಯಿತು. ಈ ಚುನಾವಣಾ ಪ್ರಕ್ರಿಯೆಯಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವ ಮನೋಭಾವವನೆಯನ್ನು ಬೆಳೆಸುವುದರ ಜೊತೆಗೆ ಮತದಾನದ ಅರಿವನ್ನು ಮೂಡಿಸುವ ಮುಖ್ಯ ಉದ್ದೇಶವಾಗಿತ್ತು.


ಚುನಾವಣಾ ಪ್ರಕ್ರಿಯೆಯಲ್ಲಿ ಮುಖ್ಯ ಶಿಕ್ಷಕಿ ಹಾಗೂ ಶಿಕ್ಷಕ ವೃಂದದವರು ಸಹಕಾರ ನೀಡಿದ್ದರು. ಆಯ್ಕೆಯಾದ ಶಾಲಾ ನಾಯಕರನ್ನು ಮುಖ್ಯ ಶಿಕ್ಷಕಿ ಅಸ್ವತಿ ಅರವಿಂದ್ ರವರು ಅಭಿನಂದಿಸಿದರು .

LEAVE A REPLY

Please enter your comment!
Please enter your name here