ರಾಮಕುಂಜ: ಶ್ರೀ ರಾಮಕುಂಜೇಶ್ವರ ವಿದ್ಯಾಲಯ ರಾಮಕುಂಜ ಇದರ 2025-26ನೇ ಶೈಕ್ಷಣಿಕ ಸಾಲಿನ ಶಿಕ್ಷಕ-ರಕ್ಷಕ ಸಂಘದ ಪ್ರಥಮ ಪೋಷಕರ ಸಭೆ ಜೂ.28ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಕೆ.ಕೇಸಪ್ಪ ರೈಯವರು ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಇದೆ ವೇಳೆ 2025-26ನೇ ಶೈಕ್ಷಣಿಕ ಸಾಲಿನ ಶಿಕ್ಷಕ -ರಕ್ಷಕ ಸಂಘವನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ನೀರಜ್ ಕುಮಾರ್ ರೈ, ಉಪಾಧ್ಯಕ್ಷರಾಗಿ ಪ್ರಶಾಂತ್, ಶ್ವೇತಾ, ಜೊತೆ ಕಾರ್ಯದರ್ಶಿಯಾಗಿ ವಿನಯ್ ಕುಮಾರ್ ರೈ, ಚೈತ್ರ ಆಯ್ಕೆಗೊಂಡರು. ಉಳಿದಂತೆ ತರಗತಿವಾರು ಪೋಷಕ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಲೈಂಗಿಕ ಕಿರುಕುಳ ವಿರೋಧ ಸಮಿತಿ, ಪೋಕ್ಸೋ ಸಮಿತಿ, ಕುಂದು ಕೊರತೆ ಪರಿಹಾರ ಸಮಿತಿಯನ್ನು ರಚಿಸಲಾಯಿತು.
ಅತಿಥಿಯಾಗಿದ್ದ ನಿವೃತ್ತ ಪ್ರಾಂಶುಪಾಲ ದುಗ್ಗಪ್ಪ ಗೌಡರವರು ಇಟಾಲಿಕ್ ಬರವಣಿಗೆಯ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದರು. ನಿವೃತ್ತ ಮುಖ್ಯೋಪಾಧ್ಯಾಯ ಗುಮ್ಮಣ್ಣ ಗೌಡ, ಶಿಕ್ಷಕ-ರಕ್ಷಕ ಸಂಘದ ಕಳೆದ ಸಾಲಿನ ಉಪಾಧ್ಯಕ್ಷ ಸುಲೈಮಾನ್ ಕೊಯಿಲ, ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಸದಸ್ಯರಾದ ಎಮ್. ಸತೀಶ್ ಭಟ್, ಬಾಲಚಂದ್ರ ಮುಚ್ಚಿಂತಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಪ್ರವೀದ್ ಪಿ.ಸ್ವಾಗತಿಸಿ ಶಾಲಾ ವರದಿಯನ್ನು ಮಂಡಿಸಿದರು. ಶಿಕ್ಷಕಿಯರಾದ ಹಿತಶ್ರೀ ನಿರೂಪಿಸಿ, ಗೀತಾ ವಂದಿಸಿದರು. ಪೋಷಕರು, ಶಿಕ್ಷಕರು, ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.