ಪುತ್ತೂರು:ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘ ಇದರ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಜೂ.29 ರಂದು ಹೊಸಮಠ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು. ಸಂಘದ ಮಾತೃ ಸಮಿತಿಯ ಅಧ್ಯಕ್ಷ ಸುರೇಶ್ ಗೌಡ ಬೈಲು ಅಧ್ಯಕ್ಷತೆ ವಹಿಸಿದ್ದರು.
ಸಂಘದ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಸಮುದಾಯ ಭವನ ಹಾಗೂ ಈ ವರ್ಷ ನಡೆದ ಕಾರ್ಯಕ್ರಮಗಳ ಲೆಕ್ಕಪತ್ರವನ್ನು ಸಭೆಯಲ್ಲಿ ಮಂಡಿಸಲಾಯಿತು. ಸಂಘದ ವತಿಯಿಂದ ವಿವಿಧ ಸಮಾಜ ಮುಖಿ ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳುವ ಬಗ್ಗೆ ತಿರ್ಮಾನಗಳನ್ನು ಕೈಗೊಳ್ಳಲಾಯಿತು.ಸಭೆಯಲ್ಲಿ ಸಲಹಾ ಸಮಿತಿಯ ಸದಸ್ಯರಾದ ಡಾ.ಶಿವಕುಮಾರ್ ಹೊಸೊಳಿಕೆ, ಜನಾರ್ಧನ ಗೌಡ ಪಣೆಮಜಲು,ಸಂಘದ ನಿರ್ದೇಶಕ ಪ್ರವೀಣ್ ಕುಂಟ್ಯಾನ ,ಬಾಲಕೃಷ್ಣ ಗೌಡ ಕೋಲ್ಪೆ, ಆಶಾತಿಮ್ಮಪ್ಪ ಗೌಡ ಕುಂಡಡ್ಕ, ದಯಾನಂದ ಗೌಡ ಆಲಡ್ಕ,ಶಿವರಾಮ ಗೌಡ ಏನೆಕಲ್ಲು ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಸಭಾ ವೇದಿಕೆಯಲ್ಲಿ ಸಂಘದ ಸಲಹಾ ಸಮಿತಿ ಸದಸ್ಯರಾದ ದೇವಣ್ಣ ಗೌಡ ನೆಲ್ಲ,ಕೃಷ್ಣಪ್ಪ ಗೌಡ ಕೆಂಜಾಳ,ದಾಮೋದರ ಗೌಡ ಕಕ್ವೆ,ಸ್ಪಂದನಾ ಸಮುದಾಯ ಸಹಕಾರ ಸಂಘದ ಅಧ್ಯಕ್ಷರಾದ ಕೇಶವ ಗೌಡ ಅಮೈ,ತಾಲೂಕು ಯುವ ಘಟಕದ ಅಧ್ಯಕ್ಷರಾದ ಪೂರ್ಣೇಶ್ ಗೌಡ ಬಲ್ಯ,ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾದ ವೀಣಾ ರಮೇಶ್ ಕೊಲ್ಲೆಸಾಗು, ಉಪಸ್ಥಿತರಿದ್ದರು.

ಸಂಘದ ಸ್ಥಾಪಕ ಸದಸ್ಯರು,ತಾಲೂಕು ಸಮಿತಿಯ ಪದಾಧಿಕಾರಿಗಳು, ಗ್ರಾಮ ,ವಲಯ ಸಮಿತಿಯ ಪದಾಧಿಕಾರಿಗಳು, ಮತ್ತು ಊರ ಗೌಡರುಗಳು ಪಾಲ್ಗೊಂಡಿದ್ದರು. ಸಂಘದ ವ್ಯವಸ್ಥಪಾಕ ಅಶೋಕ್ ಶೇಡಿ 2024-25 ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರು.ಸಂಘದ ಮಾತೃ ಸಮಿತಿಯ ಉಪಾಧ್ಯಕ್ಷರಾದ ತಮ್ಮಯ್ಯ ಗೌಡ ಸುಳ್ಯ ಸ್ವಾಗತಿಸಿದರು,ಸಂಘದ ಕಾರ್ಯದರ್ಶಿಯಾದ ಪ್ರಶಾಂತ್ ಪಂಜೋಡಿ ವಂದಿಸಿದರು.