ಪುತ್ತೂರು: ಸುಮಾರು 38 ವರುಷಗಳಿಂದ ಇಲ್ಲಿನ ಮರೀಲ್ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಯಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ, ಆಪರೇಟರ್ ಹುದ್ದೆಯಲ್ಲೂ ಸೇವೆ ಸಲ್ಲಿಸಿರುವ ಇಲ್ಲಿನ ಶಾಂತಿಗೋಡು ಮುಂಡೋಡಿ ನಿವಾಸಿ ಎಂ .ರಾಜೀವ ಜೂ.30ರಂದು ಕರ್ತವ್ಯದಿಂದ ನಿವೃತ್ತಿ ಹೊಂದಿದ್ದಾರೆ. ಮುಂಡೋಡಿಯಲ್ಲಿ ಮೂರ್ತೆ ಕೆಲಸ ನಿರ್ವಹಿಸುತ್ತಿದ್ದ ದಿ. ಎಲ್ಯಣ್ಣ ಪೂಜಾರಿ , ಕಮಲ ಎಲ್ಯಣ್ಣ ಪೂಜಾರಿ ದಂಪತಿ ಪುತ್ರನಾಗಿರುವ ಇವರ ಪತ್ನಿ ಪದ್ಮ ರಾಜೀವ ಪುರುಷರಕಟ್ಟೆಯಲ್ಲಿ ಟೈಲರಿಂಗ್ ವೃತ್ತಿಯನ್ನು ನಡೆಸುತ್ತಿದ್ದಾರೆ. ಇವರಿಗೆ ಈರ್ವರು ಪುತ್ರರಿದ್ದು, ಪ್ರಣಮ್ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದು, ಇನ್ನೋರ್ವ ಪುತ್ರ ಪ್ರೀತಮ್ ಕತ್ತಾರ್ ನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುತ್ತಾರೆ.
