ಪುತ್ತೂರು: ನೆ.ಮುಡ್ನೂರು ಗ್ರಾಮದ ಗೋಳಿತ್ತಡಿ ಎಂಬಲ್ಲಿ ರಸ್ತೆ ಮಧ್ಯೆ ಬೃಹದಾಕಾರದ ಹೊಂಡ ನಿರ್ಮಾಣವಾಗಿದ್ದು ಅಪಾಯವನ್ನು ಆಹ್ವಾನಿಸುತ್ತಿದೆ. ಮಳೆ ನೀರು ನಿಂತ ಪರಿಣಾಮ ಗುಂಡಿಯ ಆಳ ಗೊತ್ತಾಗದೇ ಅನೇಕ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಈ ರಸ್ತೆಯಲ್ಲಿ ಇದೆ ಪರಿಸ್ಥಿತಿಯಾಗಿದ್ದು ಯುವಕರು ಸೇರಿಕೊಂಡು ಗುಂಡಿ ಮುಚ್ಚುವ ಕಾರ್ಯ ಮಾಡಿದ್ದರು, ಆದರೆ ಈ ಬಾರಿ ಮತ್ತೆ ಅದೇ ಸಮಸ್ಯೆ ಉಂಟಾಗಿದ್ದು ಸಂಬಂಧಪಟ್ಟವರು ರಸ್ತೆಗುಂಡಿಯನ್ನು ಮುಚ್ಚಿ ಸಾರ್ವಜನಿಕರ, ವಾಹನ ಸವಾರರ ಬೇಡಿಕೆ ಈಡೇರಿಸುವ ಮೂಲಕ ಸಂಭಾವ್ಯ ಅಪಾಯವನ್ನು ತಪ್ಪಿಸಬೇಕೆನ್ನುವ ಆಗ್ರಹ ವ್ಯಕ್ತವಾಗಿದೆ. ಇದೇ ರಸ್ತೆ ಗುಂಡಿಯಲ್ಲಿ ಇತ್ತೀಚೆಗೆ ಯಾರೋ ಬಾಳೆಗಿಡವನ್ನು ನೆಟ್ಟಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಜೂ.30ರಂದು ನೆ.ಮುಡ್ನೂರು ಗ್ರಾ.ಪಂ ಸದಸ್ಯ ಮಹಮ್ಮದ್ ರಿಯಾಝ್ ನೇತೃತ್ವದಲ್ಲಿ ಸ್ಥಳೀಯ ಯುವಕರು ರಸ್ತೆಗುಂಡಿ ಬಳಿ ನಿಂತುಕೊಂಡಿ ಗುಂಡಿಯಲ್ಲಿ ಗಿಡ ನೆಡುವ ಸಾಂಕೇತಿಕ ಪ್ರತಿಭಟನೆ ನಡೆಸಿದ್ದು ಸಂಬಂಧಪಟ್ಟವರು ಕೂಡಲೇ ಗಮನಹರಿಸಿ ಎಂದು ಒತ್ತಾಯಿಸಿದ್ದಾರೆ.